ಮೇ 4ರಿಂದ ಮದ್ಯ ಮಾರಾಟಕ್ಕೆ ಅನುಮತಿ ಹಿನ್ನೆಲೆ: ಷರತ್ತು ವಿಧಿಸಿದ ದ.ಕ.ಜಿಲ್ಲಾಡಳಿತ
Update: 2020-05-03 21:18 IST
ಮಂಗಳೂರು, ಮೇ 3: ದ.ಕ.ಜಿಲ್ಲೆಯಲ್ಲಿ ಸೋಮವಾರದಿಂದ ಅನ್ವಯವಾಗುವಂತೆ ಬೆಳಗ್ಗೆ 9 ರಿಂದ ಸಂಜೆ 7ರ ವರೆಗೆ ಲಾಕ್‌ಡೌನ್ ಸಡಿಲಿಸಲಾಗಿದೆ. ಈ ಮಧ್ಯೆ ಮದ್ಯ ಮಾರಾಟಕ್ಕೂ ರಾಜ್ಯ ಸರಕಾರ ಅನುಮತಿ ನೀಡಿದ್ದು, ಜಿಲ್ಲಾಡಳಿತವು ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.
ಅದರಂತೆ ವೈನ್‌ಶಾಪ್‌ಗಳಲ್ಲಿ ಮೂವರು ಮಾತ್ರ ಸಿಬ್ಬಂದಿ ಇರಬೇಕು, ಮದ್ಯಮಳಿಗೆಯ ಒಳಗೆ ಐವರು ಮತ್ತು ಹೊರಗೆ ಐವರು ಗ್ರಾಹಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮದ್ಯದ ಅಂಗಡಿಯ ಮುಂದೆ ಬ್ಯಾರಿಕೇಡ್ ಅಳವಡಿಸಬೇಕು, ಇಬ್ಬರು ಭದ್ರತಾ ಸಿಬ್ಬಂದಿಯನ್ನು ನಿಯುಕ್ತಿ ಗೊಳಿಸಿ ಕಾವಲು ಹಾಕಬೇಕು ಮತ್ತು ಗ್ರಾಹಕರು, ಸಿಬ್ಬಂದಿಯು ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ. ಅಲ್ಲದೆ ಮದ್ಯದ ಅಂಗಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಮದ್ಯದಂಗಡಿಯ ಮಾಲಕರಿಗೆ ದ.ಕ.ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶಿಸಿದ್ದಾರೆ.