ದುಬೈ: ಕೆಸಿಎಫ್ ನೇತೃತ್ವದಲ್ಲಿ ಜಮಾಲ್ ಅಂತ್ಯಕ್ರಿಯೆ

Update: 2020-05-03 17:33 GMT

ದುಬೈ : ಇತ್ತೀಚೆಗೆ ದುಬೈಯಲ್ಲಿ ಮೃತಪಟ್ಟ ಉಳ್ಳಾಲ ಮಿಲ್ಲತ್‍ನಗರ ನಿವಾಸಿ ಯು.ಟಿ.ಜಮಾಲ್ ಇವರ ಮೃತದೇಹದ ಅಂತಿಮ ಪ್ರಕ್ರಿಯೆಗಳನ್ನು ಕೆಸಿಎಫ್ ಯುಎಇ ಶಿಕ್ಷಣ ವಿಭಾಗದ ಅಧ್ಯಕ್ಷ ಇಬ್ರಾಹೀಂ ಸಖಾಫಿ ಕೆದುಂಬಾಡಿ ಹಾಗೂ ಕೆಸಿಎಫ್ ದುಬೈ ನಾರ್ತ್ ಝೋನ್ ಸಾಂತ್ವಾನ ವಿಭಾಗದ ಅಧ್ಯಕ್ಷ ಅಲಿ ಅಸ್ಗರ್ ಕೂಳೂರು ಇವರ ನೇತೃತ್ವದಲ್ಲಿ ನಡೆಸಲಾಯಿತು.

ಕುಟುಂಬ ಸದಸ್ಯರು ಹಾಗೂ ಸಂಘಟನೆಯ ಇತರ ಕಾರ್ಯಕರ್ತರು ಈ ಸಂದರ್ಭದಲ್ಲಿ ಸಹಕರಿಸಿದ್ದರು.

ವದಂತಿಗಳಿಗೆ ಕಿವಿಗೊಡದಂತೆ ಮನವಿ

ದುಬೈ ಹಾಗೂ ಅಬುಧಾಬಿಗಳಲ್ಲಿ ಕೋವಿಡ್-19 ಕಾರಣ ಮೃತಪಟ್ಟವರ ಮೃತದೇಹಗಳನ್ನು ದಹನ ಮಾಡಲಾಗುತ್ತಿದೆ ಎಂಬ ಸಂದೇಶವೊಂದು ವಾಟ್ಸಪ್‍ನಲ್ಲಿ ಹರಿದಾಡುತ್ತಿದ್ದು ಇದು ಶುದ್ಧ ಸುಳ್ಳು ಎಂದು ಕೆಸಿಎಫ್ ಯುಎಇ ಪ್ರಕಾಶನ ವಿಭಾಗದ ಅಧ್ಯಕ್ಷ ಅಬ್ದುಲ್ ಕರೀಂ ಮುಸ್ಲಿಯಾರ್ ಸ್ಪಷ್ಪಪಡಿಸಿದ್ದಾರೆ.

ಕೋವಿಡ್ 19 ಸಂಬಂಧ ಕನ್ನಡಿಗರು ಮೃತಪಟ್ಟಲ್ಲಿ ಅವರ ಮಯ್ಯತ್ ನಮಾಝ್, ದಫನ ಸೇರಿದಂತೆ ಇನ್ನಿತರ ಪ್ರಕ್ರಿಯೆಗಳನ್ನು ಕೆಸಿಎಫ್ ನಾಯಕರ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಯುಎಇಯಲ್ಲಿ ಮೃತಪಟ್ಟ ತಮ್ಮ ಬಂಧುಗಳ ಅಂತ್ಯ ಸಂಸ್ಕಾರದ ಕುರಿತು ಊರಿನಲ್ಲಿರುವವವರು ಯಾವುದೇ ರೀತಿಯಲ್ಲಿ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಈ ರೀತಿಯ ಸುಳ್ಳು ವಾಯ್ಸ್ ಸಂದೇಶಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿಯಬಿಡಬಾರದು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News