×
Ad

'ಎಮರ್ಜೆನ್ಸಿ ಹೆಲ್ಪ್ ಲೈನ್' ವಾಟ್ಸ್ಆ್ಯಪ್ ಗ್ರೂಪ್ ವತಿಯಿಂದ ಕಿಟ್ ವಿತರಣೆ

Update: 2020-05-03 23:18 IST

ಮಂಗಳೂರು : ಲಾಕ್‌ಡೌನ್ ಹಿನ್ನೆಲೆಯಲ್ಲಿ 'ಎಮರ್ಜೆನ್ಸಿ ಹೆಲ್ಪ್ ಲೈನ್' ಎಂಬ ವಾಟ್ಸ್ಆ್ಯಪ್ ಗ್ರೂಪ್ ಒಂದು ಸರ್ವಧರ್ಮದ ಬಡಕುಟುಂಬಗಳಿಗೆ ಮತ್ತು ಹಳ್ಳಿ ಪ್ರದೇಶದ ಮನೆಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.

ಯಾರೂ ಕೂಡ ಹಸಿದಿರಬಾರದು ಎಂಬ ಉದ್ದೇಶದಿಂದ ಈ ಒಂದು ಕಾರ್ಯದಲ್ಲಿ ನಮ್ಮ ಕಾರ್ಯಕರ್ತರು ತಮ್ಮ ಶಕ್ತಿ ಮೀರಿ ಶ್ರಮಪಟ್ಟಿದ್ದಾರೆ‌ ಎಂದು ಗ್ರೂಪ್ ಪದಾಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ ಹಗಲೆನ್ನದೆ ಜನರ ಹಿತಕ್ಕಾಗಿ ಜೊತೆಯಾಗಿ ನಿಂತ ದಕ್ಷಿಣ ಕನ್ನಡ ಜಿಲ್ಲೆಯ ಪೋಲೀಸ್ ಸಿಬ್ಬಂದಿ ವರ್ಗದರಿಗೆ ಎಮರ್ಜೆನ್ಸಿ ಹೆಲ್ಪ್ ಲೈನ್ ತಂಡ ಧನ್ಯವಾದ ಅರ್ಪಿಸಿ, ಪೊಲೀಸ್ ಸಿಬ್ಬಂದಿಗಳಿಗೆ ಎಮರ್ಜೆನ್ಸಿ ಹೆಲ್ಪ್ ಲೈನ್ ತಂಡದ ಇಲ್ಯಾಸ್ ಮಂಗಳೂರು, ರಫೀಕ್ ಪಾಣೇಲ, ನಝೀರ್ ಸಾಮಣಿಗೆ, ಫಾರೂಕ್ ಬಿಗ್ ಗ್ಯಾರೇಜ್, ತಸ್ಲೀಮ್ ಹರೇಕಳ ಜೊತೆಗೂಡಿ ಫಲಹಾರ ನೀಡಿ ಶುಭ ಹಾರೈಸಿ, ಅಭಿನಂದನೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News