ಮಂಗಳೂರಿನ ಸೇವಾಸಂಸ್ಥೆಗಳಿಂದ ಸಕಲೇಶಪುರದ ಕುಗ್ರಾಮಗಳಿಗೆ ರೇಶನ್ ಕಿಟ್ ವಿತರಣೆ

Update: 2020-05-03 17:53 GMT

ಸಕಲೇಶಪುರ : ಸಕಲೇಶಪುರ ತಾಲೂಕಿನ ಕುಗ್ರಾಮಗಳಿಗೆ ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಹಾಗೂ ಎನ್.ಜಿ.ಓ. ಕೋರ್ಡಿನೇಶನ್ ಕಮಿಟಿಯಿಂದ ಸುಮಾರು ನಾಲ್ಕು ಲಕ್ಷ ರೂ. ವೆಚ್ಚದ 228 ರೇಶನ್ ಕಿಟ್ ಗಳನ್ನು ರವಿವಾರ ವಿತರಿಸಲಾಯಿತು.

ಸಕಲೇಶಪುರ ತಾಲೂಕು ತಹಶೀಲ್ದಾರರಾದ ಡಾ.ಮಂಜುನಾಥ್ ಅವರು ಆನೆಮಹಲ್ ಜುಮಾ ಮಸೀದಿ ವಠಾರದಲ್ಲಿ ಸರ್ವಧರ್ಮೀಯರಿಗೆ ರೇಶನ್ ಕಿಟ್ ವಿತರಿಸುವ ಮೂಲಕ ಚಾಲನೆ ನೀಡಿದರು.

ಎಂ.ಫ್ರೆಂಡ್ಸ್ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಕಾರ್ಯದರ್ಶಿ ರಶೀದ್ ವಿಟ್ಲ, ಆನೆಮಹಲ್ ಜುಮಾ ಮಸೀದಿ ಅಧ್ಯಕ್ಷರಾದ ಹಸೈನಾರ್, ತುಫೈಲ್ ಅಹ್ಮದ್, ಇಂತಿಯಾಝ್ ಮಂಗಳೂರು, ಮಜೀದ್ ಮಂಗಳೂರು, ಅಬ್ದುಲ್ ಹಮೀದ್, ಎಡ್ವಕೇಟ್ ಇಸ್ಮಾಯಿಲ್ ನೆಲ್ಯಾಡಿ, ಆಶಿಕ್ ಕುಕ್ಕಾಜೆ, ರಫೀಕ್ ನೆಟ್ಲ ಉಪಸ್ಥಿತರಿದ್ದರು.

ಆನೆಮಹಲ್ ನಲ್ಲಿ 105, ದೇಖ್'ಲಾ ಪ್ರದೇಶಕ್ಕೆ 85, ರಕ್ಷಿದಿ ಎಂಬಲ್ಲಿಗೆ 9, ಕಾಡಮನೆಗೆ 13 ಹಾಗೂ ಮಾರನಹಳ್ಳಿಯಲ್ಲಿ 17 ಬಡ ಕುಟುಂಬಗಳಿಗೆ ರೇಶನ್ ಕಿಟ್ ಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News