ಮದ್ಯ ಖರೀದಿಸುವ ಭರದಲ್ಲಿ ಸುರಕ್ಷಿತ ಅಂತರ ಮರೆತ ಜನರು

Update: 2020-05-04 07:35 GMT
ಚಿತ್ರ ಕೃಪೆ: ಎಎನ್‌ಐ

ಹೊಸದಿಲ್ಲಿ, ಮೇ 4: ಕೇಂದ್ರ ಸರಕಾರ ದೇಶಾದ್ಯಂತ ಕಂಟೈನ್‌ಮೆಂಟ್ ವಲಯಗಳ ಹೊರತುಪಡಿಸಿ ಎಲ್ಲ ವಲಯಗಳಲ್ಲಿ ಮದ್ಯ ಹಾಗೂ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಮೇ 4ರಿಂದ ಅನುಮತಿ ನೀಡಿದೆ. ಮದ್ಯದಂಗಡಿಯನ್ನು ಗ್ರೀನ್, ಆರೆಂಜ್ ಹಾಗೂ ರೆಡ್ ವಲಯಗಳಲ್ಲಿ(ಕಂಟೈನ್‌ಮೆಂಟ್ ವಲಯ ಹೊರತುಪಡಿಸಿ)ತೆರೆಯಲು ಸರಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ದೇಶದ ಕೆಲವೆಡೆ ಮದ್ಯ ಖರೀದಿಗಾಗಿ ಮುಗಿಬಿದ್ದ ಜನರು ಸುರಕ್ಷಿತ ಅಂತರವನ್ನು ಮರೆತ್ತಿದ್ದಾರೆ.

ಕೆಲವಡೆ ನಿರ್ಬಂಧಗಳಿದ್ದವು. ಅಂಗಡಿಯವರು ಎರಡು ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಪ್ರತಿಯೊಬ್ಬ ಗ್ರಾಹಕರಿಗೆ ಸೂಚಿಸಿದ್ದರು. ದಿಲ್ಲಿಯಲ್ಲಿ 150 ಲಿಕರ್ ಶಾಪ್‌ಗಳ ತೆರವಿಗೆ ಅವಕಾಶ ನೀಡಲಾಗಿದೆ. ಸೋಮವಾರದ ಬೆಳಗ್ಗಿನ ಜಾವ ದಿಲ್ಲಿ,ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಜನರು ಕ್ಯೂನಲ್ಲಿ ನಿಂತು ಮದ್ಯ ಖರೀದಿಸಲು ಮುಂದಾಗಿರುವ ದೃಶ್ಯ ಕಂಡುಬಂದಿದೆ. ಕೆಲವು ಅಂಗಡಿಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಯತ್ನಿಸಲಾಗಿದ್ದರೆ,ಇನ್ನು ಕೆಲವೆಡೆ ಜನದಟ್ಟಣೆಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಪಂಜಾಬ್,ಛತ್ತೀಸ್‌ಗಢ ರಾಜ್ಯಗಳಲ್ಲಿ ಜನರು ಸುರಕ್ಷಿತ ಅಂತರ ನಿಯಮ ಉಲ್ಲಂಘಿಸಿರುವುದು ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News