ಗೋಧಿ ಚೀಲಗಳಲ್ಲಿ ಬಡವರಿಗೆ 15,000 ರೂ.: ವೈರಲ್ ಫೋಟೊಗಳ ಬಗ್ಗೆ ಆಮಿರ್ ಖಾನ್ ಪ್ರತಿಕ್ರಿಯೆ

Update: 2020-05-04 08:00 GMT

ಹೊಸದಿಲ್ಲಿ: ಬಾಲಿವುಡ್ ನಟ ಆಮಿರ್ ಖಾನ್ ಅವರು ಲಾಕ್ ಡೌನ್‍ನಿಂದ ಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡುವ  ಸಲುವಾಗಿ ಗೋಧಿಯ ಚೀಲಗಳಲ್ಲಿ ಹಣ ಇಟ್ಟಿದ್ದರು ಎಂಬ ವರದಿಗಳು ಅಂತರ್ಜಾಲದಲ್ಲಿ ಸುದ್ದಿಯಾದ ಕೆಲವೇ ದಿನಗಳಲ್ಲಿ ನಟ ಸ್ಪಷ್ಟೀಕರಣ ನೀಡಿದ್ದಾರೆ.

ಟಿಕ್ ಟಾಕ್ ವೀಡಿಯೋವೊಂದನ್ನು ಆಧರಿಸಿ ಹಲವು ಮಾಧ್ಯಮಗಳು ಕಳೆದ ವಾರ ಈ ಸುದ್ದಿಯನ್ನು ಪ್ರಕಟಿಸಿದ್ದವಲ್ಲದೆ, ಕೊರೋನ ಲಾಕ್ ಡೌನ್‍ನಿಂದ ಬಹಳಷ್ಟು ಕಷ್ಟದಲ್ಲಿರುವವರಿಗೆ ವಿತರಿಸಲೆಂದು ಆಮಿರ್ ಖಾನ್ ಒಂದು ಟ್ರಕ್ ತುಂಬ ಗೋಧಿ ಪ್ಯಾಕೆಟುಗಳನ್ನು  ಕಳುಹಿಸಿದ್ದರು ಹಾಗೂ ಪ್ರತಿ ಪ್ಯಾಕೆಟುಗಳಲ್ಲಿ ರೂ 15,000 ನಗದು ಇತ್ತು ಎಂದು ವಿವರಿಸಲಾಗಿತ್ತು.

ಈ ವರದಿಗಳು ಸುಳ್ಳು ಎಂದು ಸೋಮವಾರ ಸ್ಪಷ್ಟೀಕರಣ ನೀಡಿದ ಆಮಿರ್, “ಅದು ನಿಜವಾಗಿದ್ದರೂ ಸಂಬಂಧಪಟ್ಟ `ರಾಬಿನ್ ಹುಡ್' ನಾನಲ್ಲ” ಎಂದಿದ್ದಾರೆ. ``ಗೋಧಿ ಚೀಲಗಳಲ್ಲಿ ಹಣ ಹಾಕಿದ ವ್ಯಕ್ತಿ ನಾನಲ್ಲ. ಅದು ಒಂದೋ ಸಂಪೂರ್ಣ ನಕಲಿ ಸುದ್ದಿಯಿರಬೇಕು, ಇಲ್ಲವೇ ರಾಬಿನ್‍ಹುಡ್ ತನ್ನನ್ನು ಬಹಿರಂಗ ಪಡಿಸಿಲ್ಲ'' ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News