ಮೇ 5, 6: ವಿದ್ಯುತ್ ಸಂಪರ್ಕ ಕಡಿತ
ಮಂಗಳೂರು, ಮೇ 4: ಗುರುಪುರ ಉಪಕೇಂದ್ರದಿಂದ ಹೊರಡುವ ಅದ್ಯಪಾಡಿ, ಸಾದೂರು ಮತ್ತು ಗುರುಪುರ ಫೀಡರುಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಮೇ 5ರಂದು ಬೆಳಗ್ಗೆ 10 ಗಂಟೆಗೆ ಸಂಜೆ 5ರವರೆಗೆ ಕಂದಾವರ, ಕಲ್ಲಾಪು, ಮೂಡುಕೆರೆ, ಕೌಡೂರು, ಅದ್ಯಪಾಡಿ, ಪಾದೆ, ದೂರಿಂಜೆ, ಮಳಲಿ, ಭವಂತಿಬೆಟ್ಟು, ಸಂಬೆಟ್ಟು, ಮುಲ್ಲಗುಡ್ಡೆ, ನಾಡಾಜೆ, ಚೆನ್ನಾರಪಾದೆ, ಸಾದೂರು, ಅಡ್ಡೂರು, ತಾರಿಕರಿಯ, ಕಾಜಿಲಕೋಡಿ, ಗುರುಪುರಪೇಟೆ, ಅಲೈಗುಡ್ಡೆ, ಕೊಟ್ಟಾರಿಗುಡ್ಡೆ, ಮಠದಗುಡ್ಡೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.
ಹೊಸಬೆಟ್ಟು ಮತ್ತು ಪಣಂಬೂರು ಫೀಡರ್‌ಗಳಲ್ಲಿ ಕೂಡ ಕಾಮಗಾರಿ ನಡೆಯಲಿರುವುದರಿಂದ ಮೇ 5ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 11ರವರೆಗೆ ಬೈಕಂಪಾಡಿ, ಗೋಕುಲ್ ನಗರ, ದುರ್ಗಾನಗರ, ಹೊಸಬೆಟ್ಟು, ಕುಳಾಯಿ, ತಾವರೆಕೊಳ, ಹೊನ್ನಕಟ್ಟೆ, ಆಚಾರಿ ಕಾಲನಿ, ಪಣಂಬೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.
ಬೆಂಗ್ರೆಯ ಫೀಡರ್‌ನಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಮೇ 6ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ತಣ್ಣೀರ್‌ಬಾವಿ, ಕಸಬ ಬೆಂಗ್ರೆ, ತೋಟ ಬೆಂಗ್ರೆ, ಬೊಕ್ಕಪಟ್ಟಣ ಬೆಂಗ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.
ಕಾಟಿಪಳ್ಳ, ಮುಲ್ಕಿ ಫೀಡರ್‌ನಲ್ಲೂ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಮೇ 6ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆ ಯವರೆಗೆ ಮುಲ್ಕಿ, ಕಿನ್ನಿಗೋಳಿ, ಹಳೆಯಂಗಡಿ, ಚೇಳ್ಯಾರು, ಎಂಆರ್‌ಪಿಎಲ್ ಕಾಲನಿ, ಕೊಳ್ನಾಡು, ಕೈಗಾರಿಕಾ ಪ್ರದೇಶ, ಗೋಳಿಜಾರ, ಎಸ್.ಕೋಡಿ, ಪಕ್ಷಿಕೆರೆ, ಶಿಮಂತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.
ಕೂಳೂರು/ಚಿಲಿಂಬಿ ಫೀಡರ್‌ನಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಮೇ 6ರಂದು ಬೆಳಗ್ಗೆ 10ರಿಂದ ಸಂಜೆ 3ರವರೆಗೆ ಗಾಂಧಿನಗರ, ಶಾಂತಿನಗರ, ವಿದ್ಯಾನಗರ, ಕೂಳೂರು ಜಂಕ್ಷನ್, ರಾಯಿಕಟ್ಟೆ, ಬಂಗ್ರಕೂಳೂರು, ಕೊಟ್ಟಾರ ಚೌಕಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.