ಮೇ 5ರಿಂದ ಮಣಿಪಾಲ ಡೆಂಟಲ್ ಕಾಲೇಜು ಚಿಕಿತ್ಸಾಲಯ ಪುನರಾರಂಭ

Update: 2020-05-04 12:43 GMT

ಮಣಿಪಾಲ, ಮೇ 4: ಮಣಿಪಾಲ ದಂತ ವೈದ್ಯಕೀಯ ಕಾಲೇಜಿನಲ್ಲಿ ತುರ್ತು ಚಿಕಿತ್ಸೆಗಾಗಿ ದಂತ ಚಿಕಿತ್ಸಾಲಯಗಳನ್ನು ಮೇ 5ರಿಂದ ಜಾರಿಗೆ ಬರುವಂತೆ ತೆರೆಯಲು ನಿರ್ಧರಿಸಲಾಗಿದೆ ಎಂದು ಕಾಲೇಜಿನ ಡೀನ್ ಡಾ. ಕೀರ್ತಿಲತಾ ಎಂ.ಪೈ ತಿಳಿಸಿದ್ದಾರೆ.

ಚಿಕಿತ್ಸಾಲಯ ಬೆಳಗ್ಗೆ 8:30ರಿಂದ ಅಪರಾಹ್ನ 12:30ರವರೆಗೆ ಮಾತ್ರ ತೆರೆದಿರುತ್ತದೆ. ದಂತ ಚಿಕಿತ್ಸಾಲಯಗಳಿಗೆ ಪ್ರವೇಶಿಸುವ ಮೊದಲು ರೋಗಿಗಳು ಕಸ್ತೂರ್ಬಾ ಆಸ್ಪತ್ರೆ ಹೊರಾಂಗಣದಲ್ಲಿ ಹಾಕಿರುವ ತಾತ್ಕಾಲಿಕ ತಪಾಸಣಾ ಶಿಬಿರಕ್ಕೆ ಭೇಟಿ ನೀಡಿ ಬಳಿಕ ದಂತ ಚಿಕಿತ್ಸಾಲಯಕ್ಕೆ ಬರಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News