×
Ad

ಷರತ್ತುಗಳಿಗೆ ಒಳಪಟ್ಟು ಮಲ್ಟಿಬ್ರಾಂಡ್ ಅಂಗಡಿ ತೆರೆಯಲು ಅನುಮತಿ: ಉಡುಪಿ ಡಿಸಿ ಜಗದೀಶ್

Update: 2020-05-04 18:21 IST

ಉಡುಪಿ, ಮೇ 4: ಕೋವಿಡ್-19ರ ನಿಯಂತ್ರಣದ ಕುರಿತಂತೆ ತಾತ್ಕಾಲಿಕ ನಿಯಮಾವಳಿಗಳನ್ನು ಹೊರಡಿಸಿದ್ದು, ರೋಗ ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಇವುಗಳಲ್ಲಿ ಜನಸಂದಣೆ ಇರುವ ಸ್ಥಳಗಳಲ್ಲಿ/ಹೆಚ್ಚು ಗ್ರಾಹಕರು ಸೇರುವ ವಾಣಿಜ್ಯ ಮಳಿಗೆಗಳು, ಎ.ಸಿ.ಮಳಿಗೆಗಳು, ಮಾಲ್‌ಗಳನ್ನು ಮುಚ್ಚುವಂತೆ ನಿರ್ದೇಶಿಸಿರುವುದು ಸೇರಿದೆ.

ಸರಕಾರದ ಆದೇಶದಂತೆ ಕೆಲವೊಂದು ವಿಷಯಗಳಿಗೆ ವಿನಾಯಿತಿಗಳನ್ನು ನೀಡಲಾಗಿದೆ. ಈಗಾಗಲೇ ಸಿನಿಮಾ ಹಾಲ್‌ಗಳು, ಮಲ್ಟಿಪ್ಲೆಕ್ಸ್ ಶಾಪಿಂಗ್ ಮಾಲ್, ಎಸಿ-ಸೆಂಟ್ರಲ್ ಎಸಿ, ಸಿಂಗಲ್ ಬ್ರಾಂಡ್, ಮಲ್ಟಿ ಬ್ರಾಂಡ್, ಕ್ರೀಡಾ ಸಂಕೀರ್ಣ ಮುಂತಾದವುಗಳನ್ನು ಹೊರತು ಪಡಿಸಿ ಉಳಿದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಇದೀಗ ಎಸಿ, ಸೆಂಟ್ರಲ್ ಎಸಿ, ಸಿಂಗಲ್ ಬ್ರಾಂಡ್, ಮಲ್ಟಿ ಬ್ರಾಂಡ್ ಅಂಗಡಿಗಳಿಗೆ ಸಂಬಂಧಿಸಿದಂತೆ ಕೆಲವು ನಿಬಂಧನೆಗಳನ್ನು ವಿಧಿಸಿ ಪ್ರಾರಂಭಿಸಲು ಅನುಮತಿ ನೀಡುವುದು ಸೂಕ್ತವೆಂದು ನಿರ್ಧರಿಸಿದ್ದು, ಈ ಕೆಳಗಿನ ಷರತ್ತಿ ಗೊಳಪಟ್ಟು ಈ ಅಂಗಡಿಗಳನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿ ಜಿ. ಜಗದೀಶ್ ಅನುಮತಿ ನೀಡಿದ್ದಾರೆ.

ಷರತ್ತುಗಳು

*ಚಿನ್ನಾಭರಣ ಮಳಿಗೆಗಳು, ಬಟ್ಟೆ ಅಂಗಡಿಗಳು, ಸಿಂಗಲ್ ಬ್ರ್ಯಾಂಡ್, ಮಲ್ಟಿ ಬ್ರ್ಯಾಂಡ್ ಸೇರಿದಂತೆ ಇಂತಹ ಮಳಿಗೆಗಳಲ್ಲಿ ಎಲ್ಲಾ ಮಹಡಿಗಳಲ್ಲಿ ಸೇರಿ ಒಟ್ಟು 25 ಜನ ಸಿಬ್ಬಂದಿಗಳು ಹಾಗೂ 25 ಜನ ಗ್ರಾಹಕರು ಹಾಗೂ ಮಲ್ಟಿ ಬ್ರಾಂಡ್ ಎಲೆಕ್ಟ್ರಾನಿಕ್ಸ್ ಮಳಿಗೆಗಳಲ್ಲಿ (ಪೈ ಸೇಲ್ಸ್, ಹರ್ಷ ಮುಂತಾದ) ಒಟ್ಟು 10 ಜನ ಸಿಬ್ಬಂದಿಗಳು ಹಾಗೂ 10 ಜನ ಗ್ರಾಹಕರಿಗೆ ಅವಕಾಶವನ್ನು ನೀಡಲಾಗಿದೆ.

*ಮಳಿಗೆ ತೆರೆಯುವ ಮುನ್ನಾ ನಿಯೋಜಿಸಲಾಗುವ ಸಿಬ್ಬಂದಿಗಳ ಆರೋಗ್ಯ ತಪಾಸಣೆಯನ್ನು ವೈದ್ಯರಿಂದ ಮಾಡಿಸಬೇಕು. ಅದೇ ಸಿಬ್ಬಂದಿ ಗಳನ್ನು ಮುಂದುವ ರಿಸಬೇಕು. ಸಿಬ್ಬಂದಿಗಳಲ್ಲಿ ರೋಗ ಲಕ್ಷಣಗಳು ಕಂಡುಬಂದಲ್ಲಿ ಅವರನ್ನು ಕರ್ತವ್ಯಕ್ಕೆ ನಿಯೋಜಿಸಬಾರದು.
*ಮಳಿಗೆಗಳಲ್ಲಿ ಎ.ಸಿ.ಯನ್ನು ಕಡ್ಡಾಯವಾಗಿ ಬಳಸುವಂತಿಲ್ಲ.
*ಮಾಸ್ಕ್, ಗ್ಲೌಸ್ ಮತ್ತು ಸ್ಯಾನಿಟೈಸರ್‌ಗಳನ್ನು ಸಿಬ್ಬಂದಿಗಳು ಕಡ್ಡಾಯವಾಗಿ ಬಳಸಬೇಕು ಮತ್ತು ಗ್ರಾಹಕರು ಸಹ ಮಾಸ್ಕ್‌ನ್ನು ಕಡ್ಡಾಯವಾಗಿ ಬಳಸಬೇಕು.
*ಪ್ರತಿದಿನ ವ್ಯವಹಾರ ಪ್ರಾರಂಭಿಸುವ ಮೊದಲು ಮತ್ತು ಮುಕ್ತಾಯದ ನಂತರ ಶಾಪ್ಳನ್ನು ಸ್ಯಾನಿಟೈಸ್ ಮಾಡಬೇಕು.
*ಮಳಿಗೆಯನ್ನು ಪ್ರವೇಶಿಸುವ ಮುನ್ನ ಗ್ರಾಹಕರು ಸ್ಯಾನಿಟೈಸರ್ ಬಳಸಿ ಒಳ ಪ್ರವೇಶಿಸುವುದಕ್ಕೆ ಮಳಿಗೆ ಮಾಲಕರು/ ವ್ಯವಸ್ಥಾಪಕರು ಏರ್ಪಾಡು ಮಾಡಿ ಕೊಳ್ಳಬೇಕು ಹಾಗೂ ಖಾತ್ರಿ ಪಡಿಸಿಕೊಳ್ಳಬೇಕು. ಅದೇ ರೀತಿ ಪ್ರತಿಯೊಬ್ಬ ಸಿಬ್ಬಂದಿ/ಗ್ರಾಹಕರಿಗೆ ಉಷ್ಣತಾ ಪರೀಕ್ಷೆ (ಥರ್ಮಲ್ ಸ್ಕೃಿನಿಂಗ್) ಮಾಡಿಸಿಯೇ ಮಳಿಗೆಗಳನ್ನು ಪ್ರವೇಶಿಸಲು ಅವಕಾಶ ನೀಡಬೇಕು.
 *60ವರ್ಷಕ್ಕಿಂತ ಅಧಿಕ ಪ್ರಾಯದ ವ್ಯಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳು ಮತ್ತು ಗರ್ಭಿಣಿಯರು ಮಳಿಗೆಗಳಿಗೆ ಬರುವುದನ್ನು ನಿರ್ಬಂಧಿಸಲಾಗಿದೆ.

*ಪ್ರತಿ ಮಳಿಗೆಗಳಿಗೆ ಆಗಮಿಸುವ ಶೀತ, ಕೆಮ್ಮು ಮತ್ತು ಜ್ವರದ ಲಕ್ಷಣ ಇರುವ ಗ್ರಾಹಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಇದನ್ನು ಮಳಿಗೆಗಳ ಮಾಲಕರು/ವ್ಯವಸ್ಥಾಪಕರು ಖಚಿತ ಪಡಿಸಿಕೊಳ್ಳಬೇಕು.

ಸರದಿಯಲ್ಲಿರುವ ಇತರ ಗ್ರಾಹಕರಿಗೆ ಮಳಿಗೆಯ ಹೊರಗೆ ಸುರಕ್ಷಿತ ಅಂತರ ಕಾಪಾಡಿ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News