ಉಡುಪಿ ಜಿಲ್ಲೆಯಲ್ಲಿ ಕೇವಲ 4 ಗಂಟೆಗಳಲ್ಲಿ 1.50 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ !
Update: 2020-05-04 20:03 IST
ಉಡುಪಿ, ಮೇ 4: ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗಿನ ಕೇವಲ 4 ಗಂಟೆಗಳ ಅವಧಿಯಲ್ಲಿ ಒಟ್ಟು 103 ವೈನ್‌ಶಾಪ್‌ಗಳಲ್ಲಿ ಸುಮಾರು 1.50 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ಆಗಿರುವುದಾಗಿ ಉಡುಪಿ ಅಬಕಾರಿ ಇಲಾಖೆಯ ವರದಿ ತಿಳಿಸಿದೆ.
1.25 ಕೋಟಿ ಮೌಲ್ಯದ ಒಟ್ಟು 41,927 ಲೀಟರ್ ಲಿಕ್ಕರ್ ಹಾಗೂ 25 ಲಕ್ಷ ರೂ. ಮೌಲ್ಯದ 15,872 ಲೀಟರ್ ಬಿಯರ್ ಮಾರಾಟವಾಗಿದೆ. ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿಯಾಗಿ 4,160 ಬಾಕ್ಸ್ ಲಿಕ್ಕರ್ ಮಾರಾಟ ಆಗುತ್ತಿದ್ದರೆ ಈ ದಿನ 4,850 ಬಾಕ್ಸ್ ಮಾರಾಟ ಆಗುವ ಮೂಲಕ ಶೇ.20ರಷ್ಟು ಪ್ರಗತಿ ಸಾಧಿಸಲಾಗಿದೆ. ಅದೇ ರೀತಿ ಬಿಯರ್ ಸರಾಸರಿ 4000 ಬಾಕ್ಸ್ ಮಾರಾಟ ಆಗುತ್ತಿದ್ದರೆ, ಈ ದಿನ ಕೇವಲ 2035 ಬಾಕ್ಸ್ ಗಳು ಮಾರಾಟ ಆಗುವ ಮೂಲಕ ಶೇ. 50ರಷ್ಟು ಕಡಿಮೆ ಮಾರಾಟ ಆಗಿದೆ ಎಂದು ಅಬಕಾರಿ ಇಲಾಖೆಯ ಮೂಲಗಳು ತಿಳಿಸಿವೆ.