ಇಡೀ ಕಾಶ್ಮೀರ ಕಣಿವೆ, ಜಮ್ಮುವಿನ ಮೂರು ಜಿಲ್ಲೆಗಳು ಕೋವಿಡ್-19 ರೆಡ್ ಝೋನ್‌ಗಳೆಂದು ಘೋಷಣೆ

Update: 2020-05-04 16:24 GMT

ಜಮ್ಮು,ಮೇ 4: ಕೊರೋನ ವೈರಸ್ ಸ್ಥಿತಿಯ ಒಟ್ಟಾರೆ ಅವಲೋಕನ ಮತ್ತು ಹೊರರಾಜ್ಯಗಳಲ್ಲಿ ಅತಂತ್ರರಾಗಿರುವ ವ್ಯಕ್ತಿಗಳ ಆಗಮನದ ನಿರೀಕ್ಷೆಯ ಆಧಾರದಲ್ಲಿ ಜಮ್ಮು-ಕಾಶ್ಮೀರ ಆಡಳಿತವು ಸಂಪೂರ್ಣ ಕಾಶ್ಮೀರ ಕಣಿವೆ ಹಾಗೂ ಜಮ್ಮು ವಿಭಾಗದ ಜಮ್ಮು,ಸಾಂಬಾ ಮತ್ತು ಕಥುವಾ ಜಿಲ್ಲೆಗಳನ್ನು ರೆಡ್ ಝೋನ್‌ಗಳನ್ನಾಗಿ ಘೋಷಿಸಿದೆ. ಮುಖ್ಯ ಕಾರ್ಯದರ್ಶಿ ಬಿವಿಆರ್ ಸುಬ್ರಹ್ಮಣ್ಯಂ ಅವರು ಈ ಸಂಬಂಧ ರವಿವಾರ ರಾತ್ರಿ ಆದೇಶವನ್ನು ಹೊರಡಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯವು ಜಮ್ಮು-ಕಾಶ್ಮೀರದ ಶ್ರೀನಗರ, ಬಂಡಿಪೋರ, ಅನಂತನಾಗ್ ಮತ್ತು ಶೋಪಿಯಾನ್ ಜಿಲ್ಲೆಗಳನ್ನು ರೆಡ್ ಝೋನ್‌ಗಳನ್ನಾಗಿ ವರ್ಗೀಕರಿಸಿತ್ತು. ಹೆಚ್ಚುವರಿ ಜಿಲ್ಲೆಗಳನ್ನು ರೆಡ್ ಅಥವಾ ಆರೆಂಜ್ ರೆನ್‌ಗಳನ್ನಾಗಿ ವರ್ಗೀಕರಿಸಲು ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನುಮತಿ ನೀಡಿತ್ತು.

ಕಾಶ್ಮೀರದ ಕಣಿವೆಯ ಎಲ್ಲ ಹತ್ತೂ ಜಿಲ್ಲೆಗಳನ್ನು ರೆಡ್ ಝೋನ್‌ಗಳೆಂದು ವರ್ಗೀಕರಿಸಲಾಗಿದೆ. ಜಮ್ಮು ಪ್ರದೇಶದಲ್ಲಿಯ ನಾಲ್ಕು ಜಿಲ್ಲೆಗಳನ್ನು ಆರೆಂಜ್ ಮತ್ತು ಮೂರು ಜಿಲ್ಲೆಗಳನ್ನು ಗ್ರೀನ್ ಝೋನ್‌ಗಳೆಂದು ಘೋಷಿಸಲಾಗಿದೆ.

ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಇತರ ಮಾರ್ಗಸೂಚಿಗಳು ಹೆಚ್ಚುಕಡಿಮೆ ದೇಶವ್ಯಾಪಿ ಮೂರನೇ ಹಂತದ ಲಾಕ್‌ಡೌನ್‌ಗಾಗಿ ಕೇಂದ್ರ ಗೃಹ ಸಚಿವಾಲಯವು ಮೇ 1ರಂದು ಹೊರಡಿಸಿದ್ದ ಆದೇಶಕ್ಕೆ ಅನುಗುಣವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News