ಅಭ್ಯಾಸಕ್ಕೆ ಹೆಣಗಾಡುತ್ತಿರುವ ಕಾಶ್ಮೀರದ ಅಥ್ಲೀಟ್‌ಗಳು

Update: 2020-05-06 08:24 GMT

ಶ್ರೀನಗರ, ಮೇ 5: ಲಾಕ್‌ಡೌನ್ ಸಮಯದಲ್ಲಿ ಕಾಶ್ಮೀರ ಕ್ರೀಡಾಪಟುಗಳು ಅಭ್ಯಾಸ ಮಾಡಲು ಮನೆಯಲ್ಲಿ ಸ್ಥಳಾವಕಾಶದ ಕೊರತೆ ಕಾರಣದಿಂದಾಗಿ ಹೆಣಗಾಡುತ್ತಿದ್ದಾರೆ.

ಕಾಶ್ಮೀರದ ಕ್ರೀಡಾಪಟುಗಳಾದ ಅಫ್ರೀನ್ ಹೈದರ್, ಇಜಾಝ್ ಹಸನ್, ವಿಲಾಯತ್ ಹುಸೈನ್ ಸೇರಿದಂತೆ ಹಲವು ಮಂದಿ ಸಮಸ್ಯೆ ಎದುರಿಸುತ್ತಿದ್ದಾರೆ.

    ಕೊರೋನ ವೈರಸ್ ಸೋಂಕು ಹರಡುತ್ತಿರುವ ಕಾರಣದಿಂದಾಗಿ ಕ್ರೀಡಾಪಟು ಅಫ್ರೀನ್ ಹೈದರ್ ಅವರನ್ನು ಕಾಶ್ಮೀರದ ಒಂದು ಸಣ್ಣ ಸ್ಥಳಕ್ಕೆ ಸೀಮಿತಗೊಳಿಸಿದೆ. ಅಲ್ಲಿ ಅವರಿಗೆ ಸದೃಢವಾಗಿರಲು ಅಗತ್ಯವಿರುವ ಸಮರ ಕಲೆಗಳ ಸಾಮಗ್ರಿಗಳಕೊರತೆಯ ಕಾರಣದಿಂದಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ವಿವಾದಿತ ಪ್ರದೇಶದ ಮುಖ್ಯ ನಗರವಾದ ಶ್ರೀನಗರದಲ್ಲಿ 20 ವರ್ಷದ ಅಫ್ರೀನ್ ತನ್ನ ಹೆತ್ತವರೊಂದಿಗೆ ಎರಡು ಬೆಡ್‌ರೂಂನ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದಾರೆ. ಅವರಿಗೆ ಟೇಕ್ವಾಂಡೋವನ್ನು ಅಭ್ಯಾಸ ಮಾಡುವುದಕ್ಕೆ ಸಮಸ್ಯೆ ಎದುರಾಗಿದೆ.

  ‘‘ನಾನು ಹೆಚ್ಚು ಇಷ್ಟಪಡದ ಸ್ಥಳದಲ್ಲಿ ಅಭ್ಯಾಸ ಮಾಡುವುದನ್ನು ಕೊನೆಗೊಳಿಸಿದ್ದೇನೆ ಎಂದು ಅಫ್ರೀನ್ ಹೇಳಿದರು. ನನ್ನ ಪೋಷಕರು ತುಂಬಾ ಬೆಂಬಲಿಸುವ ಕಾರಣ ನಾನು ಅಭ್ಯಾಸವನ್ನು ಮುಂದುವರಿಯುತ್ತೇನೆ’’ ಎಂದು ಹೇಳಿದರು. ಅಫ್ರೀನ್ ಮನೆಯಲ್ಲಿಯೇ ಅಭ್ಯಾಸ ಮಾಡಬೇಕಾಗಿರುವುದು ಇದು ಮೊದಲ ಬಾರಿ ಅಲ್ಲ.

ಕಳೆದ ಬೇಸಿಗೆಯಲ್ಲಿ ಭಾರತವು ಈ ಪ್ರದೇಶದ ರಾಜ್ಯತ್ವ ಮತ್ತು ಅರೆ ಸ್ವಾಯತ್ತತೆಯನ್ನು ರದ್ದುಗೊಳಿಸಿದ ನಂತರ ಮತ್ತು ಅಂತರ್ಜಾಲ, ಸೆಲ್ಫೋನ್ ನೆಟ್‌ವರ್ಕ್‌ಗಳು, ಲ್ಯಾಂಡ್‌ಲೈನ್ ಟೆಲಿಫೋನ್ ಮತ್ತು ಕೇಬಲ್ ಟಿವಿಯನ್ನು ಸ್ಥಗಿತಗೊಳಿಸುವುದು ಸೇರಿದಂತೆ ನಾಗರಿಕ ಹಕ್ಕುಗಳು ಮತ್ತು ಸಂವಹನಗಳ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿದ ನಂತರ ಅವರು ತಮ್ಮ ಮನೆಯಲ್ಲಿಯೇ ತಿಂಗಳುಗಳ ಕಾಲ ಉಳಿದಿದ್ದರು.

ತೊಂದರೆ ಅನುಭವಿಸುತ್ತಿರುವ ಜನರಲ್ಲಿ ಕ್ರೀಡಾಪಟುಗಳು ಸೇರಿದ್ದಾರೆ ಎಂದು ವುಶು ಚಾಂಪಿಯನ್ ಇಜಾಝ್ ಹಸನ್ ಹೇಳಿದ್ದಾರೆ.

 ಶ್ರೀನಗರದ ಏಕೈಕ ಒಳಾಂಗಣ ಕ್ರೀಡಾಂಗಣವನ್ನು ಸಂಪರ್ಕ ತಡೆಯ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಕಳೆದ ವರ್ಷ ನನ್ನ ಮನೆಯ ಸಮೀಪವಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನನ್ನ ಅಭ್ಯಾಸವನ್ನು ಮಾಡಲು ಸಾಧ್ಯವಾಯಿತು. ಆದರೆ ಈ ವರ್ಷ ಲಾಕ್‌ಡೌನ್ ನನ್ನನ್ನು ಮತ್ತು ನನ್ನಂತಹ ಅನೇಕರನ್ನು ಮನೆಯಲ್ಲಿ ಅಭ್ಯಾಸ ಮಾಡಲು ಒತ್ತಾಯಿಸಿದೆ ಎಂದು ಹಸನ್ ಹೇಳಿದರು.

 ‘‘ನಾನು ರಾಷ್ಟ್ರೀಯ ಪಂದ್ಯಗಳಲ್ಲಿ ಆಡುವುದನ್ನು ತಪ್ಪಿಸಿಕೊಂಡಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ನಾವು ರಾಜಕೀಯ ಲಾಕ್‌ಡೌನ್ ಕಾರಣದಿಂದಾಗಿ ಪಂದ್ಯಾವಳಿಗಳನ್ನು ತಪ್ಪಿಸಿಕೊಂಡಿದ್ದೇವೆ ’’ಎಂದು ಅವರು ಹೇಳಿದರು.

  ಅಲ್ಟ್ರಾ-ಮ್ಯಾರಥಾನ್ ಓಟಗಾರ ಹಮೀದ್ ಅಝೀಝ್ ತನ್ನ ಫಿಟ್‌ನೆಸ್‌ನ್ನು ಕಾಪಾಡಿಕೊಳ್ಳಲು ಮತ್ತು ಕೊರೋನ ವೈರಸ್ ವಿರುದ್ಧ ಹೋರಾಡಲು ತನ್ನ ಮನೆಯ ಬಳಿ ಅಭ್ಯಾಸ ಮಾಡುತ್ತಾರೆೆ ಎಂದು ಹೇಳಿದರು.

 ‘‘ಮನೆಯಲ್ಲಿಯೇ ಇರುವುದರಿಂದ ಪರಿಚಿತ ಎದುರಾಳಿಯನ್ನು ಟ್ರಾಕ್‌ನಲ್ಲಿ ಎದುರಿಸುವ ಮೊದಲು ನಾವು ಅಪರಿಚಿತ ಎದುರಾಳಿಯ ವಿರುದ್ಧ ಈ ಹೋರಾಟವನ್ನು ಗೆಲ್ಲಬಹುದು ’’ಎಂದು ಅಝಿಝ್ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News