×
Ad

ಕೊರೋನ ವೈರಸ್ ನಾಶಗೊಳಿಸುವ ಶಕ್ತಿ ಹೊಂದಿದ ಲಸಿಕೆ ಅಭಿವೃದ್ಧಿಪಡಿಸಿದ್ದೇವೆ: ಇಟಲಿ ವಿಜ್ಞಾನಿಗಳು

Update: 2020-05-06 16:21 IST

ರೋಮ್ : ಕೊರೋನ ವೈರಸ್ ಅನ್ನು ಮನುಷ್ಯರ ಜೀವಕೋಶಗಳಲ್ಲಿ ನಾಶಗೊಳಿಸುವ ಶಕ್ತಿಯಿರುವ ಒಂದೆರಡು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಇಟಲಿಯ ವಿಜ್ಞಾನಿಗಳ ತಂಡವೊಂದು ಹೇಳಿಕೊಂಡಿದೆ.

ಇಟಾಲಿಯನ್ ಸುದ್ದಿ ಸಂಸ್ಥೆ ಅನ್ಸಾ ಪ್ರಕಾರ ಟಾಕಿಸ್ ಎಂಬ ಕಂಪೆನಿಯ ವಿಜ್ಞಾನಿಗಳ ತಂಡವು ಈ ಲಸಿಕೆ ತಯಾರಿಸಿದೆ. ಇಲಿಗಳ ದೇಹಗಳಲ್ಲಿದ್ದ ಆ್ಯಂಟಿಬಾಡಿಗಳನ್ನು ಪ್ರತ್ಯೇಕಗೊಳಿಸಿ ವೈರಸ್ ಮನುಷ್ಯರ ಜೀವಕೋಶಗಳನ್ನು ಹಾನಿಗೊಳಿಸುವುದನ್ನು ತಡೆಯಲು ಈ ಲಸಿಕೆ ಯಶಸ್ವಿಯಾಗಿದೆ ಎಂದು ವಿಜ್ಞಾನಿಗಳ ತಂಡ ತಿಳಿಸಿದೆ.

ರೋಮ್ ನಗರದ ಸ್ಪಾಲ್ಲನ್ಝಾನಿ ಇನ್‍ಸ್ಟಿಟ್ಯೂಟ್‍ನಲ್ಲಿ ಪ್ರಯೋಗ ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News