ಮಸೀದಿ-ಮದ್ರಸ ಸಿಬ್ಬಂದಿಯ ಸಂಬಳ ಕಡಿತಗೊಳಿಸದಂತೆ ಮನವಿ
ಮಂಗಳೂರು, ಮೇ 6: ಲಾಕ್‌ಡೌನ್‌ನಿಂದಾಗಿ ರಾಜ್ಯದ ಮಸೀದಿ-ಮದ್ರಸಗಳಿಗೆ ಬೀಗ ಬಿದ್ದಿದೆ. ಪ್ರಸ್ತುತ ಮಸೀದಿ ಮದ್ರಸಗಳಲ್ಲಿ ಸೇವೆ ಸಲ್ಲಿಸು ತ್ತಿರುವ ಲಕ್ಷಾಂತರ ಸಿಬ್ಬಂದಿಯು ಮನೆಯಲ್ಲಿದ್ದಾರೆ. ಅವರಲ್ಲಿ ಮುದರ್ರಿಸ್, ಖತೀಬ್, ಮುಅಲ್ಲಿಂ, ಮುಅಝ್ಝಿನ್‌ಗಳೂ ಸೇರಿದ್ದಾರೆ. ಯಾವ ಕಾರಣಕ್ಕೂ ಅವರ ಮಾಸಿಕ ವೇತನವನ್ನು ಕಡಿತಗೊಳಿಸಬಾರದು ಎಂದು ರಾಜ್ಯ ವಕ್ಫೃ್ ಮಂಡಳಿ ಸದಸ್ಯ ಜಿ. ಯಾಕೂಬ್ ಯೂಸುಫ್ ಮನವಿ ಮಾಡಿದ್ದಾರೆ.
ಲಾಕ್‌ಡೌನ್ ಆರ್ಥಿಕವಾಗಿ ಪ್ರತೀ ಮೊಹಲ್ಲಾದಲ್ಲೂ ಸಾಕಷ್ಟು ಪರಿಣಾಮ ಬೀರಿದೆ. ಹಾಗಾಗಿ ಮಸೀದಿ-ಮದ್ರಸಗಳ ಸಿಬ್ಬಂದಿಯ ವೇತನವನ್ನು ಕಡಿತಗೊಳಿಸುವುದು ಅಥವಾ ಅವರನ್ನು ಕೆಲಸದಿಂದ ಕಿತ್ತುಹಾಕಬಾರದು. ಮುಸ್ಲಿಂ ಸಮುದಾಯ ಬಹಳ ಹಿಂದಿನಿಂದಲೂ ವಿದ್ವಾಂಸರನ್ನು ಗೌರವಿಸುತ್ತಲೇ ಬಂದಿದೆ. ಸಮುದಾಯಕ್ಕೆ ನೇತೃತ್ವ ನೀಡಬೇಕಾಗಿರುವ, ಧಾರ್ಮಿಕ ವಿದ್ಯಾಭ್ಯಾಸ, ಮಾರ್ಗದರ್ಶನ ನೀಡಬೇಕಾಗಿರುವ ಈ ವಿಭಾಗವನ್ನು ಪೋಷಿಸಿ ಬೆಳೆಸಬೇಕಾದದ್ದು ಎಲ್ಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಯಾವುದೇ ಮೊಹಲ್ಲಾದ ಮಸೀದಿ- ಮದ್ರಸ ದ ಸಿಬ್ಬಂದಿ ವರ್ಗದ ವೇತನ ಕಡಿತ ಅಥವಾ ಸೇವೆಯಿಂದ ವಜಾಗೊಳಿಸಬಾರದು ಎಂದು ಜಿ.ಯಾಕೂಬ್ ವಿನಂತಿಸಿದ್ದಾರೆ.