×
Ad

ಮಾಸ್ಕ್ ತಯಾರಿಕಾ ಕಾರ್ಖಾನೆಯಲ್ಲೂ ಮಾಸ್ಕ್ ಧರಿಸಲು ನಿರಾಕರಿಸಿದ ಟ್ರಂಪ್

Update: 2020-05-06 20:58 IST

ಫೀನಿಕ್ಸ್ (ಅಮೆರಿಕ), ಮೇ 6: ಸಾಮಾನ್ಯ ಜನಜೀವನವನ್ನು ಪುನರಾರಂಭಿಸಿದರೆ ಅಮೆರಿಕದಲ್ಲಿ ಹೆಚ್ಚು ಜನ ಸಾಯುತ್ತಾರೆ ಎನ್ನುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಒಪ್ಪಿಕೊಂಡರು. ಆದರೆ, ಮುಖಕವಚ ತಯಾರಾಗುವ ಕಾರ್ಖಾನೆಗೆ ಭೇಟಿ ನೀಡಿದಾಗಲೂ ಮುಖಕವಚ ಧರಿಸಲು ನಿರಾಕರಿಸಿದರು! ಆ ಮೂಲಕ, ಅಮೆರಿಕದಲ್ಲಿ ಕೊರೋನ ವೈರಸ್‌ನ ತೀವ್ರತೆ ಕಡಿಮೆಯಾಗಿದೆ ಎನ್ನುವುದನ್ನು ಸಾಬೀತುಪಡಿಸುವುದು ಅವರ ಉದ್ದೇಶವಾಗಿತ್ತು!

ಸುರಕ್ಷಿತ ಅಂತರ ಕ್ರಮಗಳನ್ನು ಸಡಿಲಗೊಳಿಸಿದರೆ ಹಾಗೂ ಮುಚ್ಚಿರುವ ಉದ್ಯಮಗಳನ್ನು ಪುನರಾರಂಭಿಸಿದರೆ ಹೆಚ್ಚಿನ ಸಂಖ್ಯೆಯ ಜನರು ಸಾಯುವುದಿಲ್ಲವೇ ಎಂಬುದಾಗಿ ಎಬಿಸಿ ನ್ಯೂಸ್ ಸುದಿ ಚಾನೆಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಸಾವಿನ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹೇಳಿದರು.

ಅರಿಝೋನ ರಾಜ್ಯದ ಫೀನಿಕ್ಸ್ ನಗರದಲ್ಲಿರುವ ಮುಖಕವಚ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿದ ವೇಳೆ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅಮೆರಿಕದಲ್ಲಿ ಕೊರೋನ ವೈರಸ್ ಈಗಾಗಲೇ 70,000ಕ್ಕೂ ಅಧಿಕ ಜನರನ್ನು ಕೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News