×
Ad

ಲಾಕ್ ಡೌನ್ : ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಆನ್ ಲೈನ್ ಪ್ರಬಂಧ ಸ್ಪರ್ಧೆ

Update: 2020-05-06 21:00 IST

ಉಡುಪಿ : ಮಿಲ್ಲತ್ ಫೌಂಡೇಶನ್ ಕುಂದಾಪುರ ವತಿಯಿಂದ ಪದವಿ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. 

ಪ್ರಬಂಧದ ವಿಷಯಗಳು ಸಮಾಜ ಸೇವೆಯ ಮಹತ್ವ, ಇಸ್ಲಾಮಿನ ದೃಷ್ಟಿಯಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಿಂದಾಗುವ ಲಾಭ ಮತ್ತು ನಷ್ಟಗಳು ಈ ಎರಡು ವಿಷಯಗಳಲ್ಲಿ ಒಂದು ವಿಷಯದ ಬಗ್ಗೆ ಪ್ರಬಂಧ ಬರೆಯಬೇಕು. ಪ್ರಬಂಧವನ್ನು ಈ  ಮೂರು ಭಾಷೆಗಳಲ್ಲಿ ಯಾವುದಾದರೂ ಒಂದು ಭಾಷೆಯಲ್ಲಿ ಮಂಡಿಸಬೇಕು. (ಕನ್ನಡ, ಇಂಗ್ಲಿಷ್, ಉರ್ದು) ಪ್ರಬಂಧ ಕಳುಹಿಸುವ ಕೊನೆಯ ದಿನಾಂಕ 12 ಮೇ 2020 ಆಗಿರುತ್ತದೆ.

ಪ್ರಬಂಧವು  500 ರಿಂದ 800 ಪದಗಳನ್ನು ಒಳಪಟ್ಟಿರಬೇಕು. ಬಹುಮಾನಗಳು: ಪ್ರಥಮ 3000 ರೂ. ದ್ವಿತೀಯ 2000 ರೂ. ತೃತೀಯ 1000 ರೂ. ಮೆಚ್ಚುಗೆ ಪಡೆದ ಪ್ರಬಂಧಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

ಪೂರ್ಣ ಹೆಸರು, ತರಗತಿ, ಕಾಲೇಜು ಹೆಸರಿನೊಂದಿಗೆ ತಮ್ಮ ಬರಹಗಳನ್ನು ಈ ನಂಬರಿಗೆ (9916690891) ವಾಟ್ಸಪ್ ಅಥವಾ (millathf@gmail.com)ಗೆ ಈ ಮೇಲ್ ಮಾಡಬೇಕು. ತೀರ್ಪುಗಾರರ ನಿರ್ಧಾರವೇ ಅಂತಿಮ  ನಿರ್ಧಾರ ವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಝಮೀರ್ ಅಹ್ಮದ್ ರಶಾದಿ, 9880122968 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News