ಜರ್ಮನಿ: ಮುಂದಿನ ವಾರ ಶಾಲೆ, ಅಂಗಡಿಗಳು ಆರಂಭ
Update: 2020-05-06 21:18 IST
ಬರ್ಲಿನ್ (ಜರ್ಮನಿ), ಮೇ 6: ನೋವೆಲ್-ಕೊರೋನ ವೈರಸ್‌ನಿಂದಾಗಿ ಸ್ಥಗಿತಗೊಂಡಿರುವ ಜನಜೀವನವನ್ನು ಈ ತಿಂಗಳಲ್ಲಿ ಸಾಮಾನ್ಯ ಸ್ಥಿತಿಗೆ ತರಲು ಜರ್ಮನಿಗೆ ಉದ್ದೇಶಿಸಿದೆ. ವೈರಸ್ ಹರಡುವ ಭೀತಿಯಲ್ಲಿ ವಾರಗಳ ಕಾಲ ದೇಶದಲ್ಲಿ ಬೀಗಮುದ್ರೆ ಹಾಕಲಾಗಿತ್ತು.
ಎಪ್ರಿಲ್ 20ರ ಬಳಿಕ ಹೊಸದಾಗಿ ದೊಡ್ಡ ಪ್ರಮಾಣದಲ್ಲಿ ಕೊರೋನ ವೈರಸ್ ಸೋಂಕು ವರದಿಯಾಗಿಲ್ಲ. ಹಾಗಾಗಿ, ದೇಶದಲ್ಲಿ ಸಾಂಕ್ರಾಮಿಕದ ತೀವ್ರತೆ ಇಳಿಮುಖವಾಗಿದೆ ಎಂಬುದಾಗಿ ಪರಿಗಣಿಸಿ ಶಾಲೆಗಳು ಮತ್ತು ಅಂಗಡಿಗಳನ್ನು ತೆರೆಯುವುದು ಸೇರಿದಂತೆ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಹಂತ ಹಂತವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಜರ್ಮನಿ ಸರಕಾರದ ಕರಡು ನಿರ್ಣಯವೊಂದು ಹೇಳಿದೆ.
ಮುಂದಿನ ವಾರದಿಂದ ನರ್ಸರಿ ಮತ್ತು ಪ್ರಾಥಮಿಕ ಶಾಲೆಗಳನ್ನು ತೆರೆಯಲು ಜರ್ಮನಿ ನಿರ್ಧರಿಸಿದೆ.