9 ಕೋಟಿ ಜನರಿಂದ ‘ಆರೋಗ್ಯ ಸೇತು’ ಡೌನ್‌ಲೋಡ್
Update: 2020-05-06 22:16 IST
ಹೊಸದಿಲ್ಲಿ, ಮೇ 6: ಆರೋಗ್ಯ ಸೇತು ಆ್ಯಪ್ ಅನ್ನು ಸುಮಾರು 9 ಕೋಟಿ ಮೊಬೈಲ್ ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರಕಾರ ಬುಧವಾರ ತಿಳಿಸಿದೆ.
ಕೊರೋನಾವೈರಸ್ ವಿರುದ್ಧ ಹೋರಾಟವನ್ನು ಉತ್ತೇಜಿಸುವ ಪ್ರಯತ್ನವಾಗಿ ಎಲ್ಲಾ ಸರಕಾರಿ ಹಾಗೂ ಖಾಸಗಿ ವಲಯದ ಉದ್ಯೋಗಿಗಳಿಗೆ ಆರೋಗ್ಯ ಸೇತು ಆ್ಯಪ್ ಬಳಸುವುದನ್ನು ಕಡ್ಡಾಯ ಗಳಿಸಲಾಗಿದೆಯೆಂದು ಅದು ಹೇಳಿದೆ.
ಹೊಸದಿಲ್ಲಿಯಲ್ಲಿ ಮಂಗಳವಾರ ನಡೆದ ಕೋವಿಡ್-19 ಕುರಿತ ಕೇಂದ್ರ ಸಚಿವರ ತಂಡಕ್ಕೆ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಆರೋಗ್ಯ ಸೇತು ಆ್ಯಪ್‌ನ ಕಾರ್ಯನಿರ್ವಹಣೆ, ಪರಿಣಾಮ ಹಾಗೂ ಪ್ರಯೋಜನಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತೆಂದು ಮೂಲಗಳು ತಿಳಿಸಿವೆ.
ತಾವು ಕೋವಿಡ್-19 ರೋಗದ ಅಪಾಯದಲ್ಲಿದ್ದೇವೆಯೇ ಎಂಬುದನ್ನು ಗುರುತಿಲು ಬಳಕೆದಾರರಿಗೆ ಆರೋಗ್ಯ ಸೇತು ಆ್ಯಪ್ ನೆರವಾಗಲಿದೆ. ಕೊರೋನ ವೈರಸ್ ಸೋಂಕು ಬಾರದಂತೆ ತಡೆಗಟ್ಟಲು ಹಾಗೂ ಆ ರೋಗದ ಲಕ್ಷಣಗಳನ್ನು ಗುರುತಿಸಲು ಅದು ನೆರವಾಗಲಿದೆ.