ಧರ್ಮಸ್ಥಳ: ಮದ್ಯದ ಅಮಲಿನಲ್ಲಿ ತಲವಾರು ದಾಳಿ; ಗಾಯಾಳು ಗಂಭೀರ
Update: 2020-05-07 11:37 IST
ಬೆಳ್ತಂಗಡಿ, ಮೇ 7: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬರ ಮೇಲೆ ತಲವಾರುವಿನಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಧರ್ಮಸ್ಥಳ ಗ್ರಾಮದ ನಾರ್ಯ ಎಂಬಲ್ಲಿ ನಡೆದಿದೆ.
ನಾರ್ಯ ನಿವಾಸಿ ಸುರೇಶ್ ಹಲ್ಲೆಗೊಳಗಾದವರು. ಲೋಕೇಶ್ ಹಲ್ಲೆ ಆರೋಪಿ. ಬುಧವಾರ ರಾತ್ರಿಯ ವೇಳೆ ನಾರ್ಯದಲ್ಲಿರುವ ಸುರೇಶ್ ಮನೆಯ ಸಮೀಪವೇ ಈ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡಿರುವ ಸುರೇಶ್ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೈಯಕ್ತಿಕ ಮನಸ್ತಾಪದಿಂದ ಈ ದಾಳಿ ನಡೆದಿದೆಯೆನ್ನಲಾಗಿದೆ. ಅಕ್ರಮ ಮದ್ಯ ಮಾರಾಟ ದಂಧೆ ನಡೆಸುತ್ತಿದ್ದನೆನ್ನಲಾದ ಆರೋಪಿ ಲೋಕೇಶ್ ಮದ್ಯದ ಅಮಲಿನಲ್ಲಿ ಸುರೇಶ್ ಮೇಲೆ ಮಾರಣಾಂತಿಕವಾಗಿ ತಲವಾರು ದಾಳಿ ನಡೆಸಿದ್ದರೆನ್ನಲಾಗಿದೆ.
ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ