ಪುತ್ತೂರು ಹೆಲ್ಪ್‌ಲೈನ್‌ನಿಂದ 600 ಕುಟುಂಬಗಳಿಗೆ 2ನೇ ಹಂತದ ಕಿಟ್ ವಿತರಣೆ
Update: 2020-05-07 15:15 IST
ಪುತ್ತೂರು, ಮೇ 7: ಲಾಕ್‌ಡೌನ್ ಹಿನ್ನೆಲೆಯಲ್ಲಿ ಪುತ್ತೂರಿನ ಹೆಲ್ಪ್‌ಲೈನ್ ವತಿಯಿಂದ 2ನೇ ಹಂತದಲ್ಲಿ 600 ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು.
ಪರ್ಲಡ್ಕದಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು, ನಗರ ಠಾಣೆಯ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ್, ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಮುಸ್ಲಿಂ ಒಕ್ಕೂಟದ ಸಂಚಾಲಕ ಅಶ್ರಫ್ ಹಾಜಿ ಕಲ್ಲೇಗ, ಹೆಲ್ಪ್‌ಲೈನ್ ಪುತ್ತೂರು ವಾಟ್ಸ್‌ಆ್ಯಪ್ ಗ್ರೂಪ್ ಅಡ್ಮಿನ್ ಸಾದಿಕ್ ಬರೆಪ್ಪಾಡಿ, ಬಶೀರ್ ಪರ್ಲಡ್ಕ, ಜಾಬಿರ್ ಅರಿಯಡ್ಕ, ಅಶ್ರಫ್ ಪಿ.ಕೆ., ಅಶ್ರಫ್ ಬಾವು ಮತ್ತಿತರರು ಉಪಸ್ಥಿತರಿದ್ದರು.