ಕಾರ್ಮಿಕರಿಗೆ ಕಾಂಗ್ರೆಸ್ ಸಹಾಯವಾಣಿ
Update: 2020-05-07 18:03 IST
ಮಂಗಳೂರು, ಮೇ 7: ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲೆಗೆ ಪ್ರಯಾಣಿಸುವ ನಾಗರಿಕರು ಹಾಗೂ ಕಾರ್ಮಿಕರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಮಾಹಿತಿ ನೀಡುವ ಉದ್ದೇಶದಿಂದ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಕ್ಷದ ಕಚೇರಿಯಲ್ಲಿ ಸಹಾಯವಾಣಿ/ಮಾಹಿತಿ ಕೇಂದ್ರವನ್ನು ತೆರೆಯಲಾಗಿದೆ.
ಇದಕ್ಕಾಗಿ ಶುಭೋದಯ ಆಳ್ವ (9886341414), ನೀರಜ್‌ಪಾಲ್ (9448030835), ಟಿ.ಕೆ.ಸುಧೀರ್ (9844038855), ನಝೀರ್ ಬಜಾಲ್ (9844933076)ಅವರನ್ನು ಡಿಸಿಸಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ನೇಮಿಸಿದ್ದು, ಅಗತ್ಯವುಳ್ಳವರು ಇವರನ್ನು ಸಂಪರ್ಕಿಸಬಹುದು ಎಂದು ಪ್ರಧಾನ ಕಾರ್ಯದರ್ಶಿ (ಕಚೇರಿ ಆಡಳಿತ) ಸಂತೋಷ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.