×
Ad

ಪಿಎಫ್‌ಐ ಮಲಾರ್ ಡಿವಿಜನ್‌ನಿಂದ ರಮಝಾನ್ ಕಿಟ್ ವಿತರಣೆ

Update: 2020-05-07 18:05 IST

ಮಂಗಳೂರು, ಮೇ 7: ಕೊರೋನ-ಲಾಕ್‌ಡೌನ್‌ನಿಂದ ತತ್ತರಿಸಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ನೆರವು ನೀಡುವ ಸಲುವಾಗಿ ಪಿಎಫ್‌ಐ ಮಲಾರ್ ಡಿವಿಜನ್ ವತಿಯಿಂದ ಹರೇಕಳ, ಮಲಾರ್,ಗ್ರಾಮಚಾವಡಿ, ಕೊಣಾಜೆ, ಮುಡಿಪು ಪ್ರದೇಶದ ಸುಮಾರು 1200ಕ್ಕೂ ಅಧಿಕ ಮನೆಗಳಿಗೆ ರಮಝಾನ್ ಕಿಟ್ ವಿತರಿಸಲಾಯಿತು. ಅಲ್ಲದೆ ಸುಮಾರು 35 ಸಾವಿರ ರೂ.ನ ಔಷಧಿ ಸಾಮಗ್ರಿಗಳನ್ನು ನೀಡಲಾಯಿತು. ಡಿವಿಜನ್ ವ್ಯಾಪ್ತಿಯ 30 ಸ್ವಯಂ ಸೇವಕರು , ಕೋವಿಡ್ 19 ತುರ್ತು ಸೇವೆಯಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು.

 ಪಿಎಫ್‌ಐ ಮಲಾರ್ ಏರಿಯಾ ವತಿಯಿಂದ ಮಲಾರ್ ವ್ಯಾಪ್ತಿಯ ಅರಸ್ತಾನ, ಅಕ್ಷರ ನಗರ, ಬದ್ರಿಯನಗರ,ಮುಬಾರಕ್ ನಗರ, ಟಿಪ್ಪುನಗರ, ಮಲಾರ್ ಜಂಕ್ಷನ್, ಮಲಾರ್ ಪದವು, ಇಸ್ಲಾಹಿ ನಗರ ಪ್ರದೇಶಗಳ 450 ಮನೆಗಳಿಗೆ ಕಿಟ್ ವಿತರಿಸಲಾಯಿತು.

ಪಿಎಫ್‌ಐ ಜೊತೆಗೆ ಅಲ್ ಮುಬಾರಕ್ ಜುಮಾ ಮಸೀದಿಯ ಕೋಶಾಧಿಕಾರಿ, ಉದ್ಯಮಿ ಎಂಕೆ ಮಜೀದ್, ಮಲಾರ್ ಹೆಲ್ಪ್ಲೈನ್, ಬದ್ರಿಯಾ ನಗರದ ಅಲ್ ಅಮೀನ್ ಸುನ್ನೀ ಯುವಜನಸಂಘ, ಎಸ್‌ಡಿಪಿಐ ಮಲಾರ್ ಬ್ರಾಂಚ್ ಸಹಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News