×
Ad

ಹೆಜಮಾಡಿ ಜ್ಯೂನಿಯರ್ ಕಾಲೇಜು: ವಿದೇಶದಿಂದ ಬಂದವರಿಗೆ ಸ್ಕ್ರೀನಿಂಗ್

Update: 2020-05-07 18:16 IST

ಪಡುಬಿದ್ರಿ:  ಲಾಕ್‍ಡೌನ್‍ನಿಂದ ಭಾರತದಲ್ಲಿ ವಿಮಾನ ಯಾನ ಸ್ಥಗಿತಗೊಂಡ ಕಾರಣ ಸಂಕಷ್ಟಕ್ಕೊಳಗಾಗಿ ವಿದೇಶದಿಂದ ಆಗಮಿಸಲಿರುವ ಜನರನ್ನು ಹೆಜಮಾಡಿ ಸರ್ಕಾರಿ ಕಾಲೇಜಿನಲ್ಲಿ ಸ್ಕ್ರೀನಿಂಗ್‍ಗೆ ವ್ಯವಸ್ಥೆ ಮಾಡಲಾಗಿದೆ.

ಹೆಜಮಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆರಂಭಿಸಲಿರುವ ತಪಾಸಣಾ ಕೇಂದ್ರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬುಧವಾರ ರಾತ್ರಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಬುಧವಾರ ಪರಿಶೀಲನೆ ನಡೆಸಿದರು. 

ಬಳಿಕ ಮಾತನಾಡಿದ ಜಿ.ಜಗದೀಶ್, ಹೊರದೇಶದಿಂದ ಜಿಲ್ಲೆಗೆ 201 ಮಂದಿ ಆಗಮಿಸಲಿದ್ದಾರೆ. ಅವರನ್ನು ಜಿಲ್ಲೆಗೆ ಪ್ರವೇಶಿಸುವ ವೇಳೆ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ತಪಾಸಣೆಯ ಬಳಿಕ ಅವರನ್ನು ಕ್ವಾರೆಂಟೈನ್ನಲ್ಲಿ ಇರಿಸಲಾಗುವುದು ಎಂದರು. 
ಕಾಪು ತಹಶಿಲ್ದಾರ್ ಮಹಮ್ಮದ್ ಇಸಾಕ್, ಕಾಪು ಸರ್ಕಲ್ ಇನ್ಸ್‍ಪೆಕ್ಟರ್ ಮಹೇಶ್ ಪ್ರಸಾದ್, ಕಂದಾಯ ಅಧಿಕಾರಿಗಳಾದ ಅರುಣ್ ಕುಮಾರ್, ವಿಜಯ್ ಉಪಸ್ಥಿತರಿದ್ದರು.

150 ಮಂದಿಗೆ ಕ್ವಾರಂಟೈನ್: ಬುಧವಾರ ರಾತ್ರಿಯಿಂದ ಗುರುವಾರ ಸಂಜೆಯವರೆಗೆ ಉಡುಪಿ ಜಿಲ್ಲೆ ಪ್ರವೇಶಿಸಿದ ತಮಿಳುನಾಡಿನ 2, ಅನ್ಯ ಜಿಲ್ಲೆಗಳ ಸುಮಾರು 60 ಹಾಗೂ ದಕ್ಷಿಣಕನ್ನಡ ಜಿಲ್ಲೆ ಪ್ರವೇಶಿಸಿದ ಅನ್ಯ ಜಿಲ್ಲೆಗಳ ಸುಮಾರು 90 ಜನರಿಗೆ ಮೊಹರು ಹಾಕಿ ಕ್ವಾರಂಟೈನ್‍ ಗೊಳಪಡಿಸಲಾಗಿದೆ. ಲಾಕ್‍ಡೌನ್ ಸಡಿಲಿಕೆಯಿಂದ ಕಳೆದೆರಡು ದಿನಗಳಿಂದ ಅವಿಭಜಿತ ಜಿಲ್ಲೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಿದ್ದು, ಹೆಜಮಾಡಿ ತಪಾಸಣಾ ಕೇಂದ್ರದಲ್ಲಿ ಒತ್ತಡವೂ ಜಾಸ್ತಿಯಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News