ವೃತ್ತಿ ಮೇಳಗಳ ಕಲಾವಿದರಿಗೆ ಮುಜರಾಯಿ ಇಲಾಖೆಯಿಂದ ಆಹಾರ ಕಿಟ್‌ಗಳ ವಿತರಣೆ
Update: 2020-05-07 19:33 IST
ಉಡುಪಿ, ಮೇ 7: ಕೊರೋನಾದಿಂದ ವೃತ್ತಿ ಮೇಳಗಳ ಪ್ರದರ್ಶನಗಳು ಸ್ಥಗಿತಗೊಂಡಿದ್ದು, ಕಲಾವಿದರು ತೀವ್ರ ಸಂಕಷ್ಟದಲ್ಲಿದ್ದಾರೆ. ಇದನ್ನು ಮನಗಂಡಿರುವ ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವಿಶೇಷ ಆಸಕ್ತಿ ವಹಿಸಿ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಸುಮಾರು 40 ಯಕ್ಷಗಾನ ವೃತ್ತಿ ಮೇಳಗಳಲ್ಲಿ ದುಡಿಯುತ್ತಿರುವ 1800 ಕಲಾವಿದರಿಗೆ ಹಾಗೂ ಉಳಿದ ಕಾರ್ಮಿಕ ವರ್ಗದವರಿಗೆ ಆಹಾರ ಸಾಮಾಗ್ರಿಗಳ ಕಿಟ್‌ಗ ವಿತರಣೆಗೆ ವ್ಯವಸ್ಥೆ ಮಾಡಿದ್ದಾರೆ.
ಇದರ ಸಾಂಕೇತಿಕ ಹಸ್ತಾಂತರವನ್ನು ಮೇ 9ರ ಶನಿವಾರ ಬೆಳಗ್ಗೆ 10 ಗಂಟೆಗೆ ಕೊಲ್ಲೂರು ದೇವಳದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸಲಿ ರುವರು. ಇದರ ನಿರ್ವಹಣೆಯ ಹೊಣೆಗಾರಿಕೆಯನ್ನು ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥಗೆ ನೀಡಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.