ಪ್ಯಾರಾಸಿಟಮಲ್ ಆಧಾರಿತ ಔಷಧ ಮಾರಾಟದ ವಿವರ ದಾಖಲಿಸಲು ಸೂಚನೆ
Update: 2020-05-07 20:42 IST
ಉಡುಪಿ, ಮೇ 7:ನೋವೆಲ್ ಕೊರೋನ (ಕೋವಿಡ್-19) ಸಾಂಕ್ರಾಮಿಕ ರೋಗವನ್ನು ಹರಡುವುದನ್ನು ತಡೆಯಲು ಉಡುಪಿ ಜಿಲ್ಲೆಯ ಎಲ್ಲಾ ಔಷಧ ವ್ಯಾಪಾರಸ್ಥರು, ಕೆಮ್ಮು, ಶೀತ, ಜ್ವರ, ದಣಿವು, ಉಸಿರಾಟದ ತೊಂದರೆಗಳಂತಹ ರೋಗಲಕ್ಷಣಗಳಿಗೆ ಪ್ಯಾರಾಸಿಟಮಲ್ ಆಧಾರಿತ ಔಷಧಿಗಳನ್ನು (ಪ್ರಿಸ್ಕೃಕ್ಷನ್ ಮತ್ತು ಒಟಿಸಿ ಎರಡೂ) ವೈದ್ಯರ ಸಲಹಾ ಚೀಟಿ ಇಲ್ಲದೆ ಮಾರಾಟ ಮಾಡದಂತೆ ಸೂಚಿಸಲಾಗಿದೆ.
ಅಲ್ಲದೇ ವೈದ್ಯರ ಸಲಹಾ ಚೀಟಿ ಮೇರೆಗೆ ಮಾರಾಟ ಮಾಡಿದಲ್ಲಿ, ರೋಗಿಯ ಹೆಸರು, ವೈದ್ಯರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮುಂತಾದ ವಿವರಗಳನ್ನು -https://pharma.karnataka.tech -ವೆಬ್ ಅಪ್ಲಿಕೇಷನ್ ನಲ್ಲಿ ಅಪ್‌ಲೋಡ್ ಮಾಡುವಂತೆ ಉಡುಪಿ ವೃತ್ತದ ಸಹಾಯಕ ಔಷಧ ನಿಯಂತ್ರಕ ನಾಗರಾಜ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.