ವಿಶೇಷ ಪ್ಯಾಕೇಜ್ ಬಿಡುಗಡೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ

Update: 2020-05-07 15:21 GMT

ಮಂಗಳೂರು, ಮೇ 7: ಅಸಂಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೇರೆ ಬೇರೆ ಕ್ಷೇತ್ರದ ಕೆಲಸಗಾರರಿಗೂ ಕೂಡ ಮುಖ್ಯಮಂತ್ರಿಗಳು ಕೂಡಲೇ ವಿಶೇಷವಾದ ಪರಿಹಾರ ಘೋಷಣೆ ಮಾಡಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಮನವಿ ಮಾಡಿದ್ದಾರೆ.

ಖಾಸಗಿ ಬಸ್‌ಗಳ ಚಾಲಕರು, ನಿರ್ವಾಹಕರು, ಟೈಲರ್ ವೃತ್ತಿಯವರು,ಲಾರಿ ಚಾಲಕರು, ಬಂಗಾರ ಮತ್ತು ಬೆಳ್ಳಿ ಕೆಲಸಗಾರರು, ಹೊಟೇಲ್ ಕಾರ್ಮಿಕರು, ಮರದ ಕೆಲಸ, ಪ್ಲಂಬಿಂಗ್ ಕೆಲಸ, ಇಲೆಕ್ಟ್ರಿಶಿಯನ್ಸ್, ಗ್ಯಾರೆಜ್‌ನಲ್ಲಿ ಕೆಲಸ ಮಾಡುವವರು, ಮೆಕಾನಿಕಲ್ ಕೆಲಸ ಮಾಡುವವರು, ಪೈಂಟರ್ ವೃತ್ತಿಯವರು, ಬೀಡಿ ಕಾರ್ಮಿಕರು, ದೈವ ಮತ್ತು ದೇವಸ್ಥಾನದ ಆರ್ಚಕರು ಹಾಗೂ ಪರಿಚಾರಕ ವೃತ್ತಿಯವರು, ದೈವರಾಧನೆ ಕಟ್ಟುವ ಪಾತ್ರಿಗಳು , ವಾದ್ಯ ನುಡಿಸುವವರು, ಯಕ್ಷಗಾನ ಮತ್ತು ರಂಗಭೂಮಿ ಹಾಗೂ ಸಂಗೀತ ಕಲಾವಿದರು, ಎಪಿಎಲ್ ಕಾರ್ಡ್ ಹೊಂದಿದ ಮಧ್ಯಮ ವರ್ಗದವರು, ಖಾಸಗಿ ಕೆಲಸ ಮಾಡುತ್ತಿರುವ ಮಧ್ಯಮ ವರ್ಗದ ಕುಟುಂಬಗಳು, ಮನೆ ಕೆಲಸದವರು, ಮೀನುಗಾರರು, ಬ್ಯೂಟಿ ಪಾರ್ಲರ್‌ನವರು, ವಿವಿಧ ಕ್ರೀಡೆಗಳ ತರಬೇತುದಾರರು ಮತ್ತಿತರ ಅಸಂಘಟಿತ ವರ್ಗದ ಕಾರ್ಮಿಕರು ಲಾಕ್‌ಡೌನ್‌ನಿಂದ ಸಮಸ್ಯೆಗೆ ಒಳಗಾಗಿದ್ದಾರೆ. ಇವರಿಗೆ ವಿಶೇಷ ಪ್ಯಾಕೇಜ್ ಮೂಲಕ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News