ಮೂಡುಬಿದಿರೆ: ಗ್ರಾಮ ಸಹಾಯಕರಿಗೆ ಆಹಾರ ಕಿಟ್ ವಿತರಣೆ
Update: 2020-05-07 20:56 IST
ಮೂಡುಬಿದಿರೆ: ಕೊರೊನ ವಾರಿಯರ್ಸ್‍ಗಳಾಗಿ ದುಡಿಯುತ್ತಿರುವ ಮೂಡುಬಿದಿರೆ ತಾಲ್ಲೂಕಿನ 24 ಗ್ರಾಮ ಸಹಾಯಕರಿಗೆ ತಹಶಿಲ್ದಾರ್ ಕಚೇರಿಯಲ್ಲಿ ಗುರುವಾರರ ತಹಶಿಲ್ದಾರ್ ಅನಿತಾಲಕ್ಷ್ಮಿ ಆಹಾರ ಕಿಟ್ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅವರು ಗ್ರಾಮ ಸಹಾಯಕರು ಕಂದಾಯ ಇಲಾಖೆಯ ಕುಟುಂಬ ಇದ್ದಂತೆ. ನಿಮ್ಮ ಕಷ್ಟ ಕಾಲದಲ್ಲಿ ನಾವು ನಿಮ್ಮ ಜತೆಗಿದ್ದೇವೆ. ಕೊರೊನ ವಿರುದ್ಧ ನಿಮ್ಮ ಹೋರಾಟ ಶ್ಲಾಘನಾರ್ಹ ಎಂದರು. ಕಂದಾಯ ನಿರೀಕ್ಷಕ ಹ್ಯಾರಿಸ್, ತಾಲ್ಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಪ್ರಕಾಶ್ ಉಪಸ್ಥಿತರಿದ್ದರು.