ಅಮೆರಿಕ: 5ರಲ್ಲಿ 1 ಮಗುವಿಗೆ ಆಹಾರದ ಕೊರತೆ
Update: 2020-05-07 20:59 IST
ವಾಶಿಂಗ್ಟನ್, ಮೇ 7: ಕೊರೋನ ವೈರಸ್ ಸಾಂಕ್ರಾಮಿಕ ಸ್ಫೋಟಗೊಂಡಂದಿನಿಂದ ಅಮೆರಿಕದಲ್ಲಿ ಐವರು ಸಣ್ಣ ಮಕ್ಕಳಲ್ಲಿ ಒಂದಕ್ಕೆ ತಿನ್ನಲು ಸಾಕಷ್ಟು ಪ್ರಮಾಣದಲ್ಲಿ ಆಹಾರ ಸಿಗುತ್ತಿಲ್ಲ ಎಂದು ಬುಧವಾರ ಪ್ರಕಟಗೊಂಡ ಸಂಶೋಧನಾ ವರದಿಯೊಂದು ತಿಳಿಸಿದೆ. ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಶನ್ ವರದಿಯು ಸಾಂಕ್ರಾಮಿಕ ಬಿಕ್ಕಟ್ಟಿನ ವಿಸ್ತತ ಆರೋಗ್ಯ ಪರಿಣಾಮಗಳ ಮೇಲೆ ಬೆಳಕು ಚೆಲ್ಲಿದೆ.
12 ವರ್ಷ ಅಥವಾ ಅದಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳನ್ನು ಹೊಂದಿರುವ ತಾಯಂದಿರ ಪೈಕಿ 17.4 ಶೇಕಡ ಮಂದಿ, ಹಣದ ಕೊರತೆಯಿಂದಾಗಿ ತಮ್ಮ ಮಕ್ಕಳಿಗೆ ಸಾಕಷ್ಟು ಪ್ರಮಾಣದಲ್ಲಿ ತಿನ್ನಲು ಆಹಾರ ಸಿಗುತ್ತಿಲ್ಲ ಎಂದು ಸಮೀಕ್ಷೆಯೊಂದರಲ್ಲಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
‘‘ಆಧುನಿಕ ಕಾಲದಲ್ಲಿ ಅಭೂತಪೂರ್ವ ಎನಿಸುವಷ್ಟರ ಮಟ್ಟಿಗೆ ಎಳೆಯ ಮಕ್ಕಳು ಆಹಾರದ ಅಭದ್ರತೆಯನ್ನು ಎದುರಿಸುತ್ತಿರುವುದು ಸ್ಪಷ್ಟವಾಗಿದೆ’’ ಎಂದು ಪ್ರಧಾನ ಸಂಶೋಧಕಿ ಲಾರನ್ ಬೋವರ್ ಹೇಳುತ್ತಾರೆ.