ರಶ್ಯ: ಸಂಸ್ಕೃತಿ ಸಚಿವೆಗೆ ಕೊರೋನ ವೈರಸ್
Update: 2020-05-07 21:26 IST
ಮಾಸ್ಕೊ (ರಶ್ಯ), ಮೇ 7: ರಶ್ಯದ ಸಂಸ್ಕತಿ ಸಚಿವೆ ಓಲ್ಗಾ ಲಯುಬಿಮೊವ ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಅವರ ವಕ್ತಾರೆಯೊಬ್ಬರು ಬುಧವಾರ ತಿಳಿಸಿದ್ದಾರೆ.
ಈಗಾಗಲೇ ಪ್ರಧಾನಿ ಮಿಖೈಲ್ ಮಿಶುಸ್ಟಿನ್ ಮತ್ತು ಕಾಮಗಾರಿ ಸಚಿವ ವ್ಲಾದಿಮಿರ್ ಯಕುಶೆವ್ ಕೋವಿಡ್-19 ಸೋಂಕು ಪೀಡಿತರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದಾರೆ.
ಸೋಂಕಿಗೆ ಒಳಗಾಗಿರುವುದು ಪತ್ತೆಯಾದ ಬಳಿಕ ಓಲ್ಗಾ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದು ವಕ್ತಾರೆ ಹೇಳಿಕೆಯೊಂದರಲ್ಲಿ ತಿಳಿಸಿದರು.
ರಶ್ಯದಲ್ಲಿ ಈವರೆಗೆ 1,65,929 ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ 1,537 ಮಂದಿ ಮೃತಪಟ್ಟಿದ್ದಾರೆ.