ಕಾರವಾರ: ಅಪರೂಪದ ಮುಳ್ಳುಹಂದಿ ಮೀನು ಪತ್ತೆ

Update: 2020-05-07 17:43 GMT

ಕಾರವಾರ, ಮೇ 7: ಹವಳಗಳ ದಂಡೆ ಇರುವ ಸಮುದ್ರ ವ್ಯಾಪ್ತಿಯಲ್ಲಿ ಪತ್ತೆಯಾಗುವ ಬೆನ್ನಿನ ಮೇಲೆ ಮುಳ್ಳು ಹೊಂದಿರುವ ಅಪರೂಪದ ಮೀನು ಕಾರವಾರದ ನಗರದ ಸಾಗರ ದರ್ಶನ ಹಾಲ್ ಹಿಂಭಾಗದ ಕಡಲ ತೀರದಲ್ಲಿ ಗುರುವಾರ ಪತ್ತೆಯಾಗಿದೆ.

ಸ್ಥಳೀಯ ಮೀನುಗಾರರು ಈ ಮೀನನ್ನು ಮುಳ್ಳು ಹಂದಿ ಮೀನು ಎನ್ನುತ್ತಾರೆ. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡಾ. ಜಗನ್ನಾಥ ರಾಥೋಡ ಇದನ್ನು ಗುರುತಿಸಿದ್ದಾರೆ. ಚರ್ಮದ ಮೇಲ್ಭಾಗದಲ್ಲಿ ಮುಳ್ಳುಗಳನ್ನು ಹೊಂದಿದ ಈ ಮೀನನ್ನು ಸ್ಪರ್ಷಿಸಿದರೆ ತುರಿಕೆಯಾಗುತ್ತದೆ. ಸ್ಪರ್ಶಿಸಿದ ಕೂಡಲೇ ದೇಹದಲ್ಲಿ ಗಾಳಿ ತುಂಬಿಕೊಂಡು ಇದು ಉಬ್ಬುತ್ತದೆ. ಮಾನವ ದೇಹಕ್ಕೆ ಇದು ವಿಷಕಾರಿಯಾದರೂ, ವಿದೇಶದಲ್ಲಿ ಈ ಮೀನನ್ನು ಔಷಧಿ ತಯಾರಿಕೆಗೆ ಬಳಸುತ್ತಾರೆ ಎಂದು ಸ್ನಾತಕೋತರ ಅಧ್ಯಯನ ಕೇಂದ್ರದ ಡಾ. ಶಿವಕುಮಾರ ಹರಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News