ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಶನ್ 2020-21ನೇ ಸಾಲಿನ 'ರಾಷ್ಟೀಯ ಪ್ರಶಸ್ತಿ'ಗೆ ಅರ್ಜಿ ಆಹ್ವಾನ

Update: 2020-05-08 11:19 GMT

ವಿಟ್ಲ: ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಶನ್ ವತಿಯಿಂದ ಕೊಡಲಾಗುವ 2020-21 ನೇ ಸಾಲಿನ 'ರಾಷ್ಟೀಯ ಪ್ರಶಸ್ತಿ'ಗಾಗಿ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು ಜೂನ್ 25 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಫೌಂಡೇಶನ್ ಅಧ್ಯಕ್ಷ  ಎಂ.ಡಿ ಜಹಾಂಗೀರ ಅಲಿ ಹಾಗೂ ದ.ಕ ಜಿಲ್ಲಾ ಸಂಚಾಲಕ ಆಶಿಕ್ ಅಲಿ ಪುತ್ತೂರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕೆಳಗಿನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ 'ರಾಷ್ಟೀಯ ಪ್ರಶಸ್ತಿ'ಯನ್ನು ನೀಡಿ ಗೌರವಿಸಲಾಗುವದು. ಪ್ರತಿಯೊಂದು ಕ್ಷೇತ್ರದಲ್ಲಿ 3 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಪತ್ರಿಕೋದ್ಯಮ, ಮಹಿಳಾ ಶಿಕ್ಷಣದ ತಲಾ 15 ವಿದ್ಯಾರ್ಥಿ ಸಾಧಕರನ್ನು ಗುರುತಿಸಲಾಗುವದು. 

ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.

ಎಂ.ಡಿ. ಜಹಾಂಗೀರ, ಅದ್ಯಕ್ಷರು ಡಾ. ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್,
ಮೆಗುರೆ ಆಸ್ಪತ್ರೆ ಹತ್ತಿರ. 
ಮುಖ್ಯ ರಸ್ತೆ ಬಸವಕಲ್ಯಾಣ  
ಪಿನ್ 585327. 
Mob. 7026786321

ಕ್ಷೇತ್ರದ ವಿವರಣೆ. 

1. ಆರೂಢ ರತ್ನಶ್ರೀ - ಜ್ಞಾನದ ಮಾರ್ಗಧರ್ಶನ ನೀಡುವ ಸ್ವಾಮೀಜಿಯವರಿಗೆ. 
2.ಬಸವ ಭೂಷಣ - ಶಾಸ್ತ್ರಿಗಳಿಗೆ.
3.ಜ್ಞಾನರತ್ನ - ಸಾಹಿತ್ಯ ಕ್ಷೇತ್ರ 
4.ನ್ಯಾಯರತ್ನ - ನ್ಯಾಯಾಂಗ ಕ್ಷೇತ್ರ 
5. ವಿದ್ಯಾರತ್ನ - ಶಿಕ್ಷಣ ಕ್ಷೇತ್ರ 
6. ಕರ್ನಾಟಕ ರತ್ನ.-ಪ್ರಾಮಾಣಿಕ ಅಧಿಕಾರಿಗಳಿಗೆ. 
7. ನಾದ ರತ್ನ - ಸಂಗೀತ ಕ್ಷೇತ್ರ 
8. ಕಾಯಕ ರತ್ನ. - ಕೃಷಿ ಕ್ಷೇತ್ರ. 
9. ಪರಿಸರ ರತ್ನ - ಪರಿಸರ ಕ್ಷೇತ್ರ
10. ಕ್ರೀಡಾ ರತ್ನ - ಕ್ರೀಡಾ ಕ್ಷೇತ್ರ 
11.ಕಲಾ ರತ್ನ - ಯಕ್ಷಗಾನ ಕ್ಷೇತ್ರ 
12.ಕಲಾಭೂಷಣ - ಚಲನಚಿತ್ರ ಕ್ಷೇತ್ರ. 
13. ಕಲಾ ಕಾಯಕಶ್ರೀ -ರಂಗಭೂಮಿ ಕ್ಷೇತ್ರ 
14. ಕಲಾ ಜ್ಞಾನಿ - ಶಿಲ್ಪ ಕಲೆ ಕ್ಷೇತ್ರ. 
15. ಜ್ಞಾನ ದರ್ಶನ ವಾಣಿ -ಜನಪದ ಕ್ಷೇತ್ರ. 
16. ಕಲಾ ಮಾಣಿಕ್ಯ - ಚಿತ್ರಕಲೆ 
17. ಶ್ರೇಷ್ಠ ರತ್ನಶ್ರೀ - ಸಂಘ ಸಂಸ್ಥೆ ಕ್ಷೇತ್ರ 
18.ಸೇವಾರತ್ನ - ಸಮಾಜಸೇವೆ 
19. ಮಾಧ್ಯಮ ರತ್ನ -ಪತ್ರಿಕೋದ್ಯಮ. 
20. ಕಾಯಕ ರತ್ನ -ಜನಪ್ರತಿನಿದಿಗಳು. 
21. ಸರ್ವ ಶ್ರೇಷ್ಠ ಮಾಣಿಕ್ಯ -ವೀರಯೋಧರಿಗೆ 
22. ಶಾಂತಿಭೂಷಣ - ಪೋಲಿಸ್ ಇಲಾಖೆಗೆ. 
23.) ಬಸವರತ್ನ ಶ್ರೀ - ಉದ್ಯಮಿಗಳಿಗೆ. 
24. ಅಂಚೆ ರತ್ನ -ಅಂಚೆ ಇಲಾಖೆ. 
25. ವಿದ್ಯಾ ಕುಸುಮ - ಆದರ್ಶ ವಿದ್ಯಾರ್ಥಿಗಳಿಗೆ. 
26. ಜನಸ್ನೇಹಿ - ಆಟೋ ಚಾಲಕರಿಗೆ. 
27. ವೈದ್ಯ ರತ್ನ - ಆದರ್ಶ ವೈದ್ಯರಿಗೆ. 
28. ಗ್ರಾಮ ರತ್ನ - ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ/ಗ್ರಾಮ ಪಂಚಾಯತ್ ಸದಸ್ಯರು 
29. ಕನ್ನಡ ರತ್ನ - ಕನ್ನಡ ಸಂಘಟನೆ ಕ್ಷೇತ್ರ. 
30. ವೀರ ವನಿತೆ - ವೀರ ಮಹಿಳೆಯರಿಗೆ. 

ಈ ಮೇಲ್ಕಾಣಿಸಿದ ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನ ಆಯ್ಕೆಮಾಡಲಾಗುವುದು. ಅರ್ಜಿಯನ್ನು ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳಿಸಬೇಕು ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News