ಉದ್ಯಾವರ ಕಾಂಗ್ರೆಸ್‌ನಿಂದ 2ನೇ ಹಂತದ ಕಿಟ್ ವಿತರಣೆ
Update: 2020-05-08 17:34 IST
ಉಡುಪಿ, ಮೇ 8: ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಎರಡನೆ ಹಂತದ 200 ಕಿಟ್‌ಗಳನ್ನು ಕೋವಿಡ್-19 ಲಾಕ್‌ಡೌನ್ ಸಂತ್ರಸ್ತ ಕುಟುಂಬಗಳಿಗೆ ವಿತರಿಸಲಾಯಿತು.
ಸಮಿತಿಯ ಕಾರ್ಯಾಲಯಲ್ಲಿ ಜರಗಿದ ಸರಳ ಸಮಾರಂಭದಲ್ಲಿ ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಮತ್ತು ಕಾಂಗ್ರೆಸ್ ಮುಖಂಡ ಉದ್ಯಾವರ ನಾಗೇಶ್ ಕುಮಾರ್ ಬೂತುಗಳಿಗೆ ವಿತರಿಸಲು ಬೂತ್ ಅಧ್ಯಕ್ಷರು ಮತ್ತು ಗ್ರಾಪಂ ಸದಸ್ಯರುಗಳಿಗೆ ಕಿಟ್‌ಗಳನ್ನು ಹಸ್ತಾಂತರಿಸಿದರು.
ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಎರಡು ಹಂತಗಳಲ್ಲಿ 2 ಟನ್ ಅಕ್ಕಿ ಮತ್ತು 1.40 ಲಕ್ಷ ಮೌಲ್ಯದ ಸಾಂಬಾರು ಜೀನಸುಗಳನ್ನು ಒಳಗೊಂಡ ಕಿಟ್‌ಗಳನ್ನು 400 ಕುಟುಂಬಕ್ಕೆ ವಿತರಿಸಿತು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬಿದ್ ಅಲಿ ಮೊದಲಾದವರು ಉಪಸ್ಥಿತರಿದ್ದರು.