ಶಿವಪುರ ಹಾಲು ಡೇರಿಯಿಂದ 300 ಮಂದಿಗೆ ಕಿಟ್ ವಿತರಣೆ
Update: 2020-05-08 21:15 IST
ಶಿವಪುರ, ಮೇ 8: ಶಿವಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಸಂಘದ ಸದಸ್ಯರಿಗೆ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರ ಸಹಿತ ಸಂಕಷ್ಟದಲ್ಲಿರುವ 300 ಕುಟುಂಬಗಳಿಗೆ ಅಕ್ಕಿ ಹಾಗೂ ಆಹಾರಧಾನ್ಯಗಳ ಕಿಟ್‌ನ್ನು ಶುಕ್ರವಾರ ವಿತರಿಸಲಾಯಿತು. ಹೆಬ್ರಿ ತಹಶೀಲ್ಧಾರ್ ಕೆ.ಮಹೇಶ್ಚಂದ್ರ ಕಿಟ್‌ಗಳನ್ನು ವಿತರಿಸಿದರು.
ಶಿವಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಮುಂದಾಳು ಬೈಕಾಡಿ ಮಂಜುನಾಥ ರಾವ್, ಸಂಘದ ಉಪಾಧ್ಯಕ್ಷ ನಾಗೇಶ್ ಶೇರಿಗಾರ್, ಮುಖ್ಯ ಕಾರ್ಯ ನಿರ್ವಾಹ ಣಾಧಿಕಾರಿ ಇಂದಿರಾ, ಜಗನ್ನಾಥ ಕುಲಾಲ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.