ಉಡುಪಿ: ರಾಘವೇಂದ್ರ ಮಠದಿಂದ 32 ಕ್ವಿಂ. ಅಕ್ಕಿ ವಿತರಣೆ
ಉಡುಪಿ, ಮೇ 8: ಕೊರೋನ ನಿಯಂತ್ರಣಕ್ಕಾಗಿ ಹೇರಿದ ಲಾಕ್‌ಡೌನ್ ನಿಂದ ಸಂಕಷ್ಟದಲ್ಲಿರುವವರಿಗೆ ಉಡುಪಿಯ ಶ್ರೀರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಎರಡನೇ ಹಂತದಲ್ಲಿ ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಸ್ಮರಣಾರ್ಥ ಮಂತ್ರಾಲಯ ಮಠಾಧೀಶ ಶ್ರೀಸುಬುಧೇಂದ್ರತೀರ್ಥ ಶ್ರೀಪಾದರ ಅಪೇಕ್ಷೆಯಂತೆ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ 32 ವಲಯಗಳಿಗೆ 32 ಕ್ವಿಂ. ಅಕ್ಕಿಯನ್ನು ಅರ್ಹ ಕುಟುಂಬಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಮಹಾಸಭಾದ ಸ್ಥಾಪಕಾಧ್ಯಕ್ಷರಾದ ವಿದ್ವಾಂಸ ಹರಿದಾಸ ಉಪಾಧ್ಯಾಯರು ರಥಬೀದಿಯ ಮಂತ್ರಾಲಯ ಶಾಖಾ ಮಠದಲ್ಲಿ ಚಾಲನೆ ನೀಡಿದರು. ಸವಿತಾ ಸಮಾಜದ 165 ಕುಟುಂಬಗಳಿಗೆ ಹಾಗೂ ಪರಿಸರದ ಅರ್ಹಭಕ್ತಾಧಿಗಳಿಗೆ ತಲಾ 25 ಕಿಲೋ ಅಕ್ಕಿಯ 200 ಕಿಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಬಡಗುಬೆಟ್ಟು ಬ್ಯಾಂಕಿನ ಇಂದ್ರಾಳಿ ಜಯಕರ ಶೆಟ್ಟಿ, ಸಿಂಡಿಕೇಟ್ ಬ್ಯಾಂಕಿನ ನಿವೃತ ಜಿ.ಎಂ ದೇವಾನಂದ ಉಪಾಧ್ಯಾಯ, ಕರ್ನಾಟಕ ಬ್ಯಾಂಕಿನ ಎ.ಜಿ.ಎಂ ಗೋಪಾಲಕೃಷ್ಣ ಸಾಮಗ, ಉದ್ಯಮಿಗಳಾದ ರಂಜನ್ ಕಲ್ಕೂರ, ಪದ್ಮರಾಜ ಆಚಾರ್ಯ, ತಲ್ಲೂರು ಶಿವರಾಮ ಶೆಟ್ಟಿ, ಉಮಾ ಯಧುನಾಥ್ ರಾವ್, ವಿಜಯ ರಾಘವ ರಾವ್, ಪ್ರಸಾದ್ ರಾವ್, ಕೃಷ್ಣಮೂರ್ತಿ ಆಚಾರ್ಯ, ಪೇಜಾವರ ಮಠದ ವಿಷ್ಣುಮೂರ್ತಿ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಶ್ರೀಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕರಾದ ಜಯತೀರ್ಥ ಆಾರ್ಯ ಕಾರ್ಯಕ್ರಮ ನಡೆಸಿಕೊಟ್ಟರು.