ಮೂಡುಬಿದಿರೆ: ಕುಸಿದು ಬಿದ್ದು ಕಾರ್ಮಿಕ ಸಾವು
Update: 2020-05-08 21:59 IST
ಮೂಡುಬಿದಿರೆ, ಮೇ 8: ಸಂಪಿಗೆ ಶಾಲೆಯ ಬಳಿ ತೋಡಾರ್ ನ ಕೂಲಿ ಕಾರ್ಮಿಕರೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದೆ.
ಅವರು ತೋಡಾರು ಕಂದಟ್ಟು ಶಿವಪ್ಪ ಅವರ ಪುತ್ರ ಚಂದ್ರಹಾಸ (37) ಎಂದು ತಿಳಿದು ಬಂದಿದೆ. ಅವರು ಅವಿವಾಹಿತರಾಗಿದ್ದರು.
ಮೇ 6ರಂದು ಅವರು ಸಂಪಿಗೆಯಲ್ಲಿರುವ ತನ್ನ ತಂಗಿಯ ಮನೆಗೆ ಬಂದಿದ್ದು ಶುಕ್ರವಾರ ಮತ್ತೆ ತೋಡಾರ್ ಗೆ ಕಾಲ್ನಡಿಗೆಯಲ್ಲಿ ಹೊರಟಿದ್ದಾಗ ಈ ಘಟನೆ ನಡೆದಿದೆ.
ತಂದೆ ಶಿವಪ್ಪ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೃತವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದರೆನ್ನಲಾಗಿದೆ.