×
Ad

ರೆಡ್‌ಕ್ರಾಸ್‌ನಿಂದ ಆರೋಗ್ಯ ಇಲಾಖೆಗೆ ಸಾಮಾಗ್ರಿ ಹಸ್ತಾಂತರ

Update: 2020-05-08 23:10 IST

ಮಂಗಳೂರು, ಮೇ 8: ರೆಡ್‌ಕ್ರಾಸ್ ಸಂಸ್ಥಾಪಕ ಸರ್ ಹೆನ್ರಿ ಡೊನಾಂಟ್‌ರ ಜನ್ಮದಿನದ ಪ್ರಯುಕ್ತ ದ.ಕ. ಜಿಲ್ಲಾ ರೆಡ್‌ಕ್ರಾಸ್ ಘಟಕದ ವತಿಯಿಂದ ಆರೋಗ್ಯ ಇಲಾಖೆಗೆ ಮಾಸ್ಕ್, ಸ್ಯಾನಿಟೈಸರ್, ಸಾಬೂನುಗಳ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ಸಂಸದರ ಕಚೇರಿಯಲ್ಲಿ ನಡೆಯಿತು.

ರೆಡ್‌ಕ್ರಾಸ್‌ನ ಪ್ರಸಕ್ತ ವರ್ಷದ ಧ್ಯೇಯವಾಕ್ಯ ‘ಸ್ವಯಂಸೇವಕರಿಗೆ ಚಪ್ಪಾಳೆ ತಟ್ಟಿರಿ’ ಎಂಬಂತೆ ಕಾರ್ಯಕ್ರಮದಲ್ಲಿ ಚಪ್ಪಾಳೆ ತಟ್ಟುವ ಮೂಲಕ ಕೊರೋನ ಸ್ವಯಂಸೇವಕರಿಗೆ ಗೌರವ ಸೂಚಿಸಲಾಯಿತು.

ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥಾಪಕರ ಜನ್ಮದಿನದ ಪ್ರಯುಕ್ತ ಕೊರೋನ ನಿಯಂತ್ರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಆರೋಗ್ಯ ಇಲಾಕೆಯ ಕಾರ್ಯಕರ್ತರಿಗೆ ನೆರವಾಗಲು ಅಗತ್ಯ ಸಾಮಾಗ್ರಿಗಳನ್ನು ರೆಡ್‌ಕ್ರಾಸ್ ನೀಡಿದೆ ಎಂದರು.

ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲು, ಭಾರತೀಯ ರೆಡ್‌ಕ್ರಾಸ್ ಜಿಲ್ಲಾಧ್ಯಕ್ಷ ಶಾಂತರಾಮ ಶೆಟ್ಟಿ, ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ, ರವೀಂದ್ರ ಶೆಟ್ಟಿ, ಗಣಪತಿ ಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ, ಜಿಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News