ಅಮೆರಿಕ: 24 ಗಂಟೆಯಲ್ಲಿ 2,448 ಮಂದಿ ಸಾವು
Update: 2020-05-08 23:51 IST
ವಾಶಿಂಗ್ಟನ್, ಮೇ 8: ಅಮೆರಿಕದಲ್ಲಿ ಕೊರೋನ ವೈರಸ್‌ನಿಂದಾಗಿ 24 ಗಂಟೆಗಳ ಅವಧಿಯಲ್ಲಿ 2,448 ಮಂದಿ ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿಅಂಶಗಳು ತಿಳಿಸಿವೆ.
ಇದರೊಂದಿಗೆ ಆ ದೇಶದಲ್ಲಿ ಈ ಮಾಹಾ ಸಾಂಕ್ರಾಮಿಕಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 75,543ಕ್ಕೆ ಏರಿದೆ. ಜಗತ್ತಿನಲ್ಲೇ ಕೊರೋನ ವೈರಸ್‌ನ ಅತಿ ದೊಡ್ಡ ಹೊಡೆತಕ್ಕೆ ಒಳಗಾದ ದೇಶ ಅಮೆರಿಕವಾಗಿದೆ. ಅಲ್ಲಿ ವೈರಸ್‌ಗೆ ಬಲಿಯಾಗುವವರ ಪ್ರಮಾಣ ಒಂದೇ ಸಮನೆ ಮುಂದುವರಿದಿದೆ.
ಅಲ್ಲಿ ಈಗ ಕೊರೋನ ವೈರಸ್ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 12,54,750ಕ್ಕೆ ಏರಿದೆ ಎಂದು ಬಾಲ್ಟಿಮೋರ್‌ನಲ್ಲಿರುವ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯ ತಿಳಿಸಿದೆ.