ಮಾಲ್ದೀವ್ಸ್‌ನಿಂದ 750 ಭಾರತೀಯರ ತೆರವು ಆರಂಭ

Update: 2020-05-08 18:23 GMT

ಮಾಲೆ (ಮಾಲ್ದೀವ್ಸ್), ಮೇ 8: ಕೊರೋನ ವೈರಸ್ ಬೀಗಮುದ್ರೆಯ ಹಿನ್ನೆಲೆಯಲ್ಲಿ ಮಾಲ್ದೀವ್ಸ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು 750 ಭಾರತೀಯರ ತೆರವು ಕಾರ್ಯಾಚರಣೆಯನ್ನು ಭಾರತೀಯ ನೌಕಾಪಡೆ ಶುಕ್ರವಾರ ಮೊದಲ ಹಂತದಲ್ಲಿ ಆರಂಭಿಸಿದೆ.

ಮಾರ್ಚ್ ತಿಂಗಳಲ್ಲಿ ಒಳಬರುವ ವಿಮಾನಗಳನ್ನು ಭಾರತ ಸರಕಾರ ನಿಷೇಧಿಸಿದ ಬಳಿಕ 12 ದೇಶಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಸುಮಾರು 15,000 ಭಾರತೀಯರನ್ನು ಮಾಲೆಯಲ್ಲಿರುವ ಎರಡು ಯುದ್ಧ ನೌಕೆಗಳು ಭಾರತಕ್ಕೆ ಕರೆತರಲಿವೆ. ಈ ಪೈಕಿ ಮೊದಲ ಹಂತದಲ್ಲಿ ಮಾಲ್ದೀವ್ಸ್‌ನಲ್ಲಿರುವ ಭಾರತೀಯರನ್ನು ಈ ನೌಕೆಗಳು ಭಾರತಕ್ಕೆ ಕರೆತರಲಿವೆ.

ಮಾಲ್ದೀವ್ಸ್‌ನಲ್ಲಿ 27,000 ಭಾರತೀಯರು ವಾಸಿಸುತ್ತಿದ್ದು, ಸುಮಾರು 4,000 ಮಂದಿ ಭಾರತಕ್ಕೆ ವಾಪಸಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News