×
Ad

ಇನ್ನೊಂದು ಬ್ಯಾಂಕ್ ಸುಸ್ತಿದಾರ ಕಂಪೆನಿಯ ಮಾಲಕರು ದೇಶಬಿಟ್ಟು ಪರಾರಿ

Update: 2020-05-09 10:44 IST

  ಹೊಸದಿಲ್ಲಿ,ಮೇ 9: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಇತರ ಬ್ಯಾಂಕುಗಳಲ್ಲಿ 400 ಕೋಟಿ ರೂ. ಅಧಿಕ ಸಾಲವನ್ನು ಮರುಪಾವತಿಸದ ಕಂಪನಿಯ ಮಾಲಕರುಗಳು ದೇಶ ಬಿಟ್ಟು ಪರಾರಿಯಾಗಿದ್ದು ,ಈ ಮೂಲಕ ಬ್ಯಾಂಕ್‌ನಲ್ಲಿ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಸುಸ್ತಿದಾರರ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ ಎಂದು ndtv.com ವರದಿ ಮಾಡಿದೆ.

ದಿಲ್ಲಿ ಮೂಲದ ಬಾಸ್ಮತಿ ರೈಸ್ ರಫ್ತುದಾರ ರಾಮದೇವ್ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಮಾಲಕರುಗಳು ಆರು ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಸದೇ ಬಾಕಿ ಇರಿಸಿರುವ ಆರೋಪದಲ್ಲಿ ಸಿಬಿಐನಿಂದ ವಿಚಾರಣೆ ಎದುರಿಸುತ್ತಿದ್ದು, ಇವರು 2016ರಿಂದ ತಲೆಮರೆಸಿಕೊಂಡಿದ್ದಾರೆ.

ಕಂಪೆನಿಯನ್ನು 2016ರಲ್ಲಿ ಕೆಲಸ ನಿರ್ವಹಿಸದ ಆಸ್ತಿ ಎಂದು ವರ್ಗೀಕರಿಸಲಾಗಿದ್ದು 4 ವರ್ಷಗಳ ಬಳಿಕ ಫೆಬ್ರವರಿ 25ರಂದು ಎಸ್‌ಬಿಐ ದೂರು ದಾಖಲಿಸಿದ ಬಳಿಕ ಕಳೆದ ವಾರ ಎಪ್ರಿಲ್ 28ರಂದು ಕೇಸ್ ದಾಖಲಿಸಿದೆ. ರಾಮದೇವ್ ಇಂಟರ್‌ನ್ಯಾಶನಲ್ ವಿವಿಧ ಬ್ಯಾಂಕ್‌ಗಳಿಂದ ಒಟ್ಟು 414 ಕೋಟಿ ರೂ. ಸಾಲ ಪಡೆದಿದೆ. ಕಂಪೆನಿಯು ಎಸ್‌ಬಿಐ ನಿಂದ 173.11 ಕೋಟಿ ರೂ., ಕೆನರಾ ಬ್ಯಾಂಕ್ ನಿಂದ 76.09ಕೋಟಿ ರೂ., ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ 63.31ಕೋಟಿ ರೂ., ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ 51.31ಕೋಟಿ ರೂ. , ಕಾರ್ಪೊರೇಶನ್ ಬ್ಯಾಂಕ್‌ನಿಂದ 36.91ಕೋಟಿ ರೂ. ಹಾಗೂ ಐಡಿಬಿಐ ಬ್ಯಾಂಕ್‌ನಿಂದ 12.27ಕೋಟಿ ರೂ. ಸಾಲ ಪಡೆದಿದೆ.

ಎಸ್‌ಬಿಐ ದೂರಿನ ಬಳಿಕ ಕಂಪೆನಿ ಹಾಗೂ ಅದರ ನಿರ್ದೇಶಕರಾದ ನರೇಶ್ ಕುಮಾರ್, ಸುರೇಶ್ ಕುಮಾರ್,ಸಂಗೀತಾ ಹಾಗೂ ಸರಕಾರಿ ಉದ್ಯೋಗಿಯ ವಿರುದ್ಧ ಸಿಬಿಐ ಕೇಸ್ ದಾಖಲಿಸಿಕೊಂಡಿದೆ. ಇವರ ವಿರುದ್ಧ ಫೋರ್ಚರಿ ಹಾಗೂ ವಂಚನೆ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News