ಪುತ್ತೂರು: ರಮಝಾನ್ ಮುಗಿಯುವವರೆಗೆ ಬಟ್ಟೆಯಂಗಡಿ ತೆರೆಯದಿರಲು ಮುಸ್ಲಿಂ ವರ್ತಕರ ತೀರ್ಮಾನ

Update: 2020-05-09 09:30 GMT

ಪುತ್ತೂರು, ಮೇ 9: ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಮಝಾನ್ ಮುಗಿಯುವವರೆಗೆ ಬಟ್ಟೆ ಅಂಗಡಿಗಳನ್ನು ತೆರೆಯದಿರಲು ಇಲ್ಲಿನ ಮುಸ್ಲಿಂ ಬಟ್ಟೆ ಅಂಗಡಿ ಮಾಲಕರು ತೀರ್ಮಾನಿಸಿದ್ದಾರೆ.

ಕೊರೋನ ವೈರಸ್ ತೀವ್ರವಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ ರಮಝಾನ್ ಹಬ್ಬದ ವಸ್ತ್ರ ಖರೀದಿಗಾಗಿ ಜನರು ಮುಗಿಬಿದ್ದು ಸಮಸ್ಯೆಗಳಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ತಮ್ಮ ಬಟ್ಟೆ ಅಂಗಡಿಗಳನ್ನು ತೆರೆಯದಿರಲು ಮುಸ್ಲಿಂ ವರ್ತಕರು ಒಮ್ಮತದ ತೀರ್ಮಾನ ಮಾಡಿದ್ದಾರೆ ಎಂದು ಪುತ್ತೂರು ‘ಕುಂಟುದ ಶಾಪ್’ ಅಂಗಡಿ ಮಾಲಕ ಖಾದರ್ ಹಾಜಿ ಕೆನರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News