×
Ad

ಕೆಮ್ಮಾರ: ರಮಝಾನ್ ಕಿಟ್ ವಿತರಣೆ

Update: 2020-05-09 15:08 IST

ಪುತ್ತೂರು, ಮೇ 9: ಕೊರೋನ ಲಾಕ್‌ಡೌನ್ ನಿಂದಾಗಿ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ದಾನಿಗಳ ಸಹಕಾರದಲ್ಲಿ ಎರಡನೇ ಹಂತದ ಕಿಟ್ ವಿತರಣೆ ನಡೆಯಿತು.

ಬೆಂಗಳೂರಿನ ಯುವ ಉದ್ಯಮಿ ಮುಸ್ತಫ ಕೆಮ್ಮಾರ ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಅಝೀಝ್ ಬಿ.ಕೆ., ಕಾರ್ಯದರ್ಶಿ ಅಬ್ದುಲ್ ಗಫ್ಫಾರ್ ಕೆಮ್ಮಾರ, ಮಾಧ್ಯಮ ಸಲಹೆಗಾರ ಹಕೀಂ ಆಕಿರೆ, ಸಂಘಟನಾ ಕಾರ್ಯದರ್ಶಿ ಬಾಶಿತ್ ಅಲಿ ಕೆಮ್ಮಾರ, ಸ್ಥಾಪಕ ಸದಸ್ಯ ಶೌಕತ್ ಅಲಿ ಜೇಡರಪೇಟೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News