ಪಿಎಂ ಕೇರ್ಸ್‌ಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷರಿಂದ 5 ಲಕ್ಷ ರೂ. ದೇಣಿಗೆ

Update: 2020-05-09 11:35 GMT

ಮಂಗಳೂರು, ಮೇ 9: ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಸ್.ಮುಹಮ್ಮದ್ ಮಸೂದ್ ಅವರು ಪ್ರಧಾನಮಂತ್ರಿ ಕೇರ್ ನಿಧಿಗೆ 5 ಲಕ್ಷ ರೂ. ದೇಣಿಗೆಯ ಚೆಕ್‌ನ್ನು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲುರಿಗೆ ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಯಲ್ಲಿ ಶನಿವಾರ ಹಸ್ತಾಂತರಿಸಿದರು.

ಮಸೂದ್‌ರ ಸಹೋದರ ಹಾಗೂ ಅನಿವಾಸಿ ಉದ್ಯಮಿ ಕೆ.ಎಸ್. ನಿಸಾರ್ ಅಹ್ಮದ್ ಈ ದೇಣಿಗೆಯನ್ನು ಪಿಎಂ ಕೇರ್ಸ್ ಫಂಡ್‌ಗೆ ನೀಡಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ಉದ್ಯಮವನ್ನು ನಡೆಸುತ್ತಿರುವ ನಿಸಾರ್ ಅಹ್ಮದ್ ಪ್ರಧಾನಿಯ ಕರೆಗೆ ಈ ಮೂಲಕ ಸ್ಪಂದಿಸಿ ಕೇಂದ್ರದ ಕೊರೋನ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಈ ವೇಳೆ ವಿವಿಧ ದೇಶಗಳಲ್ಲಿ ಸಂಕಷ್ಟದಲ್ಲಿರುವ ಅನಿವಾಸಿ ಭಾರತೀಯರನ್ನು ಏರ್‌ಲಿಫ್ಟ್ ಮಾಡುವ ದೃಢ ನಿರ್ಧಾರ ಕೈಗೊಂಡಿರುವ ಪ್ರಧಾನಿಯನ್ನು ನಿಸಾರ್ ಅಹ್ಮದ್ ಪ್ರಶಂಸಿಸಿದ್ದಾರೆ. ನಳಿನ್‌ಗೆ ಹೂಗುಚ್ಛ ನೀಡುವ ಮೂಲಕ ಸಾಂಕೇತಿಕವಾಗಿ ಮೋದಿ ಕ್ರಮವನ್ನು ಬೆಂಬಲಿಸಿದ್ದಾರೆ.

ಈ ಸಂದರ್ಭ ಬಿಜೆಪಿ ನಾಯಕ ರವಿಶಂಕರ್ ಮಿಜಾರ್, ಡಾ. ಆರೀಫ್ ಮಸೂದ್, ಹಾಜಿ ಅಬ್ದುರ್ರಝಾಕ್, ಮಾಸ್ಟರ್ ಫ್ಲವರ್ಸ್ ಫಕೀರಬ್ಬ, ಮುಹಮ್ಮದ್ ಹನೀಫ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News