×
Ad

​ಎಡಪದವು: ರಿಕ್ಷಾ ಚಾಲಕರಿಗೆ ಕಿಟ್ ವಿತರಣೆ

Update: 2020-05-09 18:01 IST

ಗುರುಪುರ, ಮೇ 9: ಇಲ್ಲಿಗೆ ಸಮೀಪದ ಎಡಪದವು, ಮೂಪೆರಾರ, ಮುಚ್ಚೂರು, ಬಡಗ ಎಡಪದವು, ತೆಂಕ ಎಡಪದವು, ಕುಪ್ಪೆಪದವು, ಮುತ್ತೂರು ಪ್ರದೇಶಗಳ ರಿಕ್ಷಾ ಪಾರ್ಕ್‌ಗಳಲ್ಲಿ ದುಡಿಯುತ್ತಿರುವ ನೂರಾರು ರಿಕ್ಷಾ ಚಾಲಕರಿಗೆ ದಿನಸಿ ಕಿಟ್‌ಗಳನ್ನು ಎಡಪದವು ರಾಮ ಮಂದಿರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ. ಭರತ್ ಶೆಟ್ಟಿ ವಿತರಿಸಿದರು.

ಈ ಸಂದರ್ಭ ಜಿಪಂ ಸದಸ್ಯ ಜನಾರ್ದನ ಗೌಡ, ಬಿಜೆಪಿ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಉಪಾಧ್ಯಕ್ಷ ಪ್ರಸಾದ್ ಎಡಪದವು, ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಕೊಟ್ಟಾರಿ ಹಾಗೂ ಸಂದೀಪ್ ಪಚ್ಚನಾಡಿ, ಎಡಪದವು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಆನಂದ ದೇವಡಿಗ, ಗ್ರಾಪಂ ಉಪಾಧ್ಯಕ್ಷ ಗಂಗಾಧರ, ಅನಿಲ್ ಪೆರಾರ, ಅಮಿತಾ ಶೆಟ್ಟಿ ಪೆರಾರ, ವೀರಪ್ಪ ಗೌಡ, ಗಣೇಶ್ ಪಾಕಜೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News