ಭಟ್ಕಳದಲ್ಲಿ ಮತ್ತೊಂದು ಕೊರೋನ ಪ್ರಕರಣ ದೃಢ
Update: 2020-05-09 18:29 IST
ಭಟ್ಕಳ: ಭಟ್ಕಳದಲ್ಲಿ ಮೇ.5ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯ ಸಂಪರ್ಕದಿಂದ ಕೊರೋನ ಸೋಂಕಿಗೊಳಗಾದ 18 ವರ್ಷದ ಯುವತಿಯ ಪ್ರಕರಣದೊಂದಿಗೆ ಆರಂಭಗೊಂಡ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ದಿನವೂ ಹೆಚ್ಚಳವಾಗುತ್ತಿದ್ದು, ಶುಕ್ರವಾರ 12 ಪ್ರಕರಣ, ಶನಿವಾರ ಮಧ್ಯಾಹ್ನದ ಆರೋಗ್ಯ ಬುಲೆಟಿನ್ ನಲ್ಲಿ 7 ಪ್ರಕರಣ ದೃಢಗೊಂಡರೆ, ಸಂಜೆಯ ಬುಲೆಟಿನ್ ನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಭಟ್ಕಳದಲ್ಲಿ 11 ಮಂದಿ ಕೊರೋನ ಸೋಂಕಿತರು ಗುಣಮುಖರಾಗಿದ್ದು, 21 ಕೊರೋನ ಸೋಂಕಿತ ಪ್ರಕರಣಗಳು ಸಕ್ರಿಯವಾಗಿವೆ. ಎಲ್ಲರಿಗೂ ಕಾರವಾರದ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.