ಅಕ್ರಮ ಗೋ-ಸಾಗಾಟ ಕಡಿವಾಣಕ್ಕೆ ಆಗ್ರಹ
Update: 2020-05-09 21:40 IST
ಉಡುಪಿ, ಮೇ 9: ಜಿಲ್ಲೆಯಲ್ಲಿ ಅಕ್ರಮ ಗೋ-ಹತ್ಯೆ, ಗೋ-ಸಾಗಾಟದಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಆದುದರಿಂದ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯಲ್ಲಿ ಚೆಕ್‌ಪೋಸ್ಟ್ ನಿರ್ಮಾಣಮಾಡಿ ವಾಹನಗಳನ್ನು ಪರಿಶೀಲಿಸಬೇಕು ಮಾತ್ರವಲ್ಲ ಗೋ-ಹತ್ಯೆ, ಗೋ-ಸಾಗಾಟದ ಬಗ್ಗೆ ದೂರು ಬಂದಲ್ಲಿ ಕೂಡಲೇ ಸ್ಪಂದಿಸುವಂತೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.