×
Ad

ಮುಂಬೈ: ಮನೆ ಕುಸಿತ, ಅವಶೇಷದಡಿಯಿಂದ 14 ಜನರ ರಕ್ಷಣೆ

Update: 2020-05-10 10:53 IST

ಮುಂಬೈ,ಮೇ 10: ಮುಂಬೈನ ಕಾಂದಿವಲಿ ಉಪನಗರದಲ್ಲಿ ರವಿವಾರ ಬೆಳಗ್ಗೆ ಮನೆಯೊಂದು ಕುಸಿದುಬಿದ್ದಿದ್ದು, ಮನೆಯ ಅವಶೇಷದಡಿಯಿಂದ 14 ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

ಪ್ರಾಥಮಿಕ ವರದಿಯ ಪ್ರಕಾರ,ಲಾಲ್‌ಜಿ ಪಾಡಾ ಪ್ರದೇಶದ ಲಿಂಕ್‌ರೋಡ್‌ನ ದೀಪ್‌ಜ್ಯೋತಿ ಚಾಳ್‌ನಲ್ಲಿ ಬೆಳಗ್ಗೆ 5 ಗಂಟೆಯ ಸುಮಾರಿಗೆ ಗೋಡೆಯ ಪಾರ್ಶ್ವಭಾಗ ಕುಸಿದುಬಿದ್ದಿದೆ. ಅಗ್ನಿಶಾಮಕ ಇಲಾಖೆಗೆ ಕರೆ ಮಾಡಲಾಗಿದ್ದು, ಬೆಳಗ್ಗೆ 5:30ಕ್ಕೆ ರಕ್ಷಣಾ ಅಧಿಕಾರಿಗಳು ಘಟನಾಸ್ಥಳ ತಲುಪಿದ್ದಾರೆ.

ಮನೆಯ ಮೇಲ್ಭಾಗದಲ್ಲಿದ್ದ 12 ಜನರನ್ನು ರಕ್ಷಿಸಲಾಗಿದ್ದು,ಅವಶೇಷಗಳಡಿ ಸಿಲುಕಿದ್ದ ಇಬ್ಬರನ್ನು ಅಗ್ನಿಶಾಮಕದಳ ಗ್ಯಾಸ್ ಕಟ್ಟರ್ ಬಳಸಿ ರಕ್ಷಿಸಿದ್ದಾರೆ.

ಅವಶೇಷಗಳಡಿ ಸಿಲುಕಿರುವ ಇನ್ನಿತರರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News