×
Ad

ಶಿವಮೊಗ್ಗದಲ್ಲಿ ಕೊರೋನ ಪಾಸಿಟಿವ್ ಪ್ರಕರಣ: ಉಡುಪಿ ಜಿಲ್ಲೆಯ ಸೋಮೇಶ್ವರ ಗಡಿಯಲ್ಲಿ ಕಟ್ಟೆಚ್ಚರ

Update: 2020-05-10 20:45 IST

ಉಡುಪಿ, ಮೇ 10: ಶಿವಮೊಗ್ಗ ಜಿಲ್ಲೆಯಲ್ಲಿ ಎಂಟು ಕೊರೋನ ಪಾಸಿಟಿವ್ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಗಡಿಭಾಗ ಹೆಬ್ರಿ ಸಮೀಪದ ಸೋಮೇಶ್ವರದಲ್ಲಿರುವ ಅಂತರ್‌ಜಿಲ್ಲಾ ಚೆಕ್‌ಪೋಸ್ಟ್‌ನಲ್ಲಿ ಇಂದು ಬೆಳಗ್ಗೆಯಿಂದ ಕಟ್ಟೆಚ್ಚರ ವಹಿಸಲಾಗಿದೆ.

ಚೆಕ್‌ಪೋಸ್ಟ್‌ನಲ್ಲಿ ಬೆಳಗ್ಗೆಯಿಂದ ಹೆಚ್ಚುವರಿ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದ್ದು, ಇವರು ಶಿಫ್ಟ್ ಆಧಾರದಲ್ಲಿ ಕರ್ತವ್ಯಗಳನ್ನು ನಿರ್ವಹಿಸುತ್ತಿ ದ್ದಾರೆ. ಅದೇ ರೀತಿ ಹೆಬ್ರಿ ಪೊಲೀಸರು, ಕಂದಾಯ ಅಧಿಕಾರಿಗಳು, ಶಿಕ್ಷಕರನ್ನು ಕೂಡ ಕರ್ತವ್ಯಕ್ಕಾಗಿ ಇಲ್ಲಿ ನೇಮಿಸಲಾಗಿದೆ. ಹೀಗೆ ಗಡಿ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.

‘ಶಿವಮೊಗ್ಗ ಜಿಲ್ಲೆಯಿಂದ ಉಡುಪಿಗೆ ಆಗಮಿಸುವ ಪ್ರತಿಯೊಬ್ಬರನ್ನು ತಪಾ ಸಣೆಗೆ ಒಳಪಡಿಸಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರು ಸ್ಕ್ರೀನಿಂಗ್ ನಡೆಸಿ ಯಾವುದೇ ಸಮಸ್ಯೆಗಳಿದ್ದರೆ ಮಾತ್ರ ಜಿಲ್ಲೆಯೊಳಗೆ ಪ್ರವೇಶಕ್ಕೆ ಅವಕಾಶ ನೀಡ ಲಾಗುತ್ತದೆ. ಜಿಲ್ಲಾಡಳಿತದ ಪಾಸ್ ಇಲ್ಲದೆ ಯಾರಿಗೂ ಜಿಲ್ಲೆಯೊಳಗೆ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಹೆಬ್ರಿ ತಹಶೀಲ್ದಾರ್ ಮಹೇಶ್ಚಂದ್ರ ತಿಳಿಸಿದ್ದಾರೆ.

ಅಗತ್ಯವಸ್ತುಗಳ ಸಾಗಾಟದ ವಾಹನಗಳನ್ನು ಕೂಡ ತೀವ್ರ ತಪಾಸಣೆ ಮಾಡ ಲಾಗುತ್ತಿದೆ. ಯಾವುದೇ ವಾಹನಗಳನ್ನು ಚೆಕ್ ಮಾಡದೆ ಒಳಗೆ ಬರಲು ಬಿಡು ವುದಿಲ್ಲ. ವಿವಿಧ ಕಾರ್ಯಕರ್ತರ ತಂಡವಾಗಿ ರಚನೆ ಮಾಡಿ, ಪಾಳಿಯಾಗಿ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಪಾಸ್ ಇಲ್ಲದವರನ್ನು ಗಡಿಯಿಂದ ವಾಪಾಸ್ಸು ಕಳುಹಿಸಲಾಗುತ್ತಿದೆ. ದಿನಕ್ಕೆ ಮೂರು ಬಾರಿ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News