ಹೊನ್ನಾಳ: ಕೋವಿಡ್ ಕುರಿತ ಕರ್ತವ್ಯ ನಿರತರಿಗೆ ಸನ್ಮಾನ

Update: 2020-05-10 15:20 GMT

ಬ್ರಹ್ಮಾವರ, ಮೇ 10: ಯುನೈಟೆಡ್ ಹೊನ್ನಾಳ ಸಮಿತಿಯ ವತಿಯಿಂದ ಕೊರೋನ ವೈರಸ್‌ನಿಂದ ಜಗತ್ತೇ ತಲ್ಲಣಗೊಂಡರು ತಮ್ಮ ಕರ್ತವ್ಯವನ್ನು ಚಾಚು ತಪ್ಪದೆ ನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ, ಮೆಸ್ಕಾಂ ಸಿಬ್ಬಂದಿಯನ್ನು ರವಿವಾರ ಹೊನ್ನಾಳದ ಎನ್.ಎನ್. ಕಾಂಪ್ಲೆಕ್ಸ್ ಮುಂಭಾಗ ಸನ್ಮಾನಿಸಲಾಯಿತು.

ಆಶಾ ಕಾರ್ಯಕರ್ತೆಯರಾದ ಮಂಜುಳಾ, ವೇದಾವತಿ, ಪ್ರಮೋದ, ಅನಿತಾ, ಮೆಸ್ಕಾಂ ಸಿಬ್ಬಂದಿ ಭಾಸ್ಕರ, ಭರಮಾನಂದ, ಪಂಚಾಯತ್ ಸಿಬ್ಬಂದಿ ರಘುಪತಿ ಹಾಗೂ ಗಣೇಶ್ ಮತ್ತು ಉಡುಪಿಯ ಕೋವಿಡ್ -19 ಆಸ್ಪತ್ರೆ ಟಿಎಂಎಪೈಯ ಉದ್ಯೋಗಿ ರೇವತಿ ಸುವರ್ಣ ಅವರನ್ನು ಕಿರು ಕಾಣಿಕೆ, ಸ್ಯಾನಿಟೈಸರ್ ಮತ್ತು ಮಾ್ಕ್ಗಳನ್ನು ನೀಡಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಜಾಫರ್ ಸಾಧಿಕ್, ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ಶೆಡ್ತಿ, ಸದಸ್ಯ ಆಬೂ ಸಾಹೇಬ್, ಸಮಿತಿಯ ಕೋಶಾಧಿಕಾರಿ ಅಬ್ದುಸ್ಸಲಾಂ ಬ್ರಹ್ಮಾವರ, ಹಿರಿಯ ಸದಸ್ಯ ಹನೀಫ್ ಸಾಹೇಬ್, ಸ್ಥಳೀಯರಾದ ನಾಗರಾಜ್ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಉದಯ ಪೂಜಾರಿ, ಹುಸೇನ್ ಸಾಹೇಬ್, ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಕಾದಿರ್, ಮಹಮ್ಮದ್ ಹುಸೇನ್, ಮೊಹಮ್ಮದ್ ಗೌಸ್, ಕಾರ್ಯದರ್ಶಿಗಳಾದ ಬಿ.ಎಸ್.ಶುಕೂರ್, ಕೆ.ಮುಕ್ತಾರ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೋವಿಡ್ 19ರ ಬಗ್ಗೆ ಜಾಗೃತಿ ಮೂಡಿಸಿ, ಮಾಸ್ಕ್ ಹಂಚಲಾಯಿತು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸಲಿಂ ವಾಜಿದ್ ಸ್ವಾಗತಿಸಿದರು. ಕಾರ್ಯದರ್ಶಿ ಜೆ.ಮುಸ್ತಾಕ್ ಅಹ್ಮದ್ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಎಚ್.ಸುಭಾನ್ ಅಮದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News