×
Ad

2.5ಲಕ್ಷ ರೂ. ಮೊತ್ತದ ಕೋವಿಡ್ ವೈದ್ಯಕೀಯ ಉಪಕರಣಗಳ ದೇಣಿಗೆ

Update: 2020-05-10 21:01 IST

ಉಡುಪಿ, ಮೇ 10: ರೋಟರಿ ಜಿಲ್ಲೆ 3182ರ ವಲಯ 4ರ ವತಿಯಿಂದ ಸುಮಾರು ಎರಡೂವರೆ ಲಕ್ಷ ರೂ. ವೌಲ್ಯದ ಕೋವಿಡ್ ಪಿಪಿ ಕಿಟ್, ಎನ್ 95 ಮಾಸ್ಕ್ ಗಳನ್ನು ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆ, ಜಿಲ್ಲಾಸ್ಪತ್ರೆ ಮತ್ತು ಪೊಲೀಸ್ ಇಲಾಖೆಗೆ ಶನಿವಾರ ನೀಡಲಾಯಿತು.

ನಿಯೋಜಿತ ಜಿಲ್ಲಾ ಗವರ್ನರ್ ರಾಜಾರಾಮ್ ಭಟ್ ನೇತೃತ್ವದಲ್ಲಿ ನೀಡ ಲಾದ ಉಪಕರಣಗಳನ್ನು ಕೋವಿಡ್ ಆಸ್ಪತ್ರೆಯ ಪರವಾಗಿ ಡಾ.ಶಶಿಕಿರಣ್ ಮತ್ತು ಕಾರ್ಯನಿರ್ವಣಾಧಿಕಾರಿ ವೆನಿಷಿಯ, ಜಿಲ್ಲಾಸ್ಪತ್ರೆಯ ಪರವಾಗಿ ಸಹಾಯಕ ಜಿಲಾ ಸರ್ಜನ್ ಡಾ.ಚಂದ್ರಶೇಖರ್ ಅಡಿಗ ಹಾಗು ಪೊಲೀಸ್ ಇಲಾಖೆಯ ಪರವಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಸ್ವೀಕರಿಸಿದರು.

ಸಹಾಯಕ ಗವರ್ನರ್ ಡಾ.ಸೇಸಪ್ಪ ರೈ, ವಲಯ ಸೇನಾನಿಗಳಾದ ಡಾ. ಸುರೇಶ ಶೆಣೈ, ಸುಂದರ್ ಶೆಟ್ಟಿ, ಸತೀಶ್, ವಲಯ 4ರ ವಿವಿಧ ಕ್ಲಬ್ಗಳ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳಾದ ಡಾ.ಶ್ರೀಧರ್, ದಯಾನಂದ ನಾಯಕ್, ರಾಜವರ್ಮ ಅರಿಗ, ಬಾಲಕೃಷ್ಣ ಕುಮಾರ್, ಉಮೇಶ್ ರಾವ್, ಯಶವಂತ್ ಬಿ.ಕೆ., ಪ್ರಭಾಕರ್ ಬಂಡಿ, ಜನಾರ್ದನ್ ಭಟ್, ಸುಂದರ್ ಬಂಗೇರ, ವಿಠ್ಠಲದಾಸ್ ಭಟ್, ರತ್ನಾಕರ್ ಇಂದ್ರಾಳಿ, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News