ದನದ ಮಾಂಸ ಸಾಗಾಟ: ಇಬ್ಬರ ಬಂಧನ

Update: 2020-05-10 16:28 GMT

ಕಾಪು, ಮೇ 10: ಅಟೋ ರಿಕ್ಷಾದಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕಾಪು ಪೊಲೀಸರು ಮೇ 9ರಂದು ಸಂಜೆ 6.30ರ ಸುಮಾರಿಗೆ ಮಲ್ಲಾರು ಗ್ರಾಮದ ಪಕೀರಣಕಟ್ಟೆ ಜಂಕ್ಷನ್‌ನಲ್ಲಿ ಬಂಧಿಸಿದ್ದಾರೆ.

ಪಕೀರಣಕಟ್ಟೆಯ ಹುಸೈನಬ್ಬ(52) ಹಾಗೂ ಅವರ ಮಗ ಅರಾಫತ್ ಯು.(32) ಬಂಧಿತ ಆರೋಪಿಗಳು. ಬಂಧಿತರಿಂದ ದನದ ಮಾಂಸ ಸಾಗಾಟಕ್ಕೆ ಬಳಸಿದ ಅಟೋ ರಿಕ್ಷಾ ಮತ್ತು ದನದ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News